ADVERTISEMENT

ಭಾರತದಲ್ಲಿ ₹5.65 ಲಕ್ಷ ಆರಂಭಿಕ ಬೆಲೆಯಲ್ಲಿ ನಿಸ್ಸಾನ್ ಗ್ರಾವೈಟ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 9:49 IST
Last Updated 20 ಫೆಬ್ರುವರಿ 2026, 9:49 IST
   

ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ನಿಸ್ಸಾನ್ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ 'ನಿಸ್ಸಾನ್ ಗ್ರಾವೈಟ್' ಅನ್ನು ಬಿಡುಗಡೆ ಮಾಡಿದೆ.

ನಿಸ್ಸಾನ್ ಮೋಟಾರ್ ಇಂಡಿಯಾದ ಹೊಸ ಉತ್ಪನ್ನಗಳ ಸರಣಿಯ ಮೊದಲ ಉತ್ಪನ್ನ ಇದಾಗಿದ್ದು, ಭಾರತದಲ್ಲಿ ಬ್ರ್ಯಾಂಡ್‌ ನ ಪುನಶ್ಚೇತನದ ಪ್ರಯಾಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಆಧುನಿಕ ಭಾರತೀಯ ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, 140 ಕೋಟಿ ಭಾರತೀಯರು ಮತ್ತು ಅವರ ಬದಲಾಗುತ್ತಿರುವ ಸಂಚಾರ ಅಗತ್ಯಗಳಿಂದ ಸ್ಫೂರ್ತಿ ಪಡೆದು ಇದನ್ನು ನಿರ್ಮಿಸಲಾಗಿದೆ.

ADVERTISEMENT

ನಿಸ್ಸಾನ್‌ ನ ವಿಶಿಷ್ಟ ‘ಸಿ’ ವಿನ್ಯಾಸ ಶೈಲಿಯ ಜೊತೆಗೆ ಆಕರ್ಷಕ ಲುಕ್ ಮತ್ತು ವಿಭಿನ್ನ ಅಸ್ಮಿತೆಯನ್ನು ಹೊಂದಿದೆ.

30+ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಇದರಲ್ಲಿ 6 ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಬ್ರೇಕ್ ಅಸಿಸ್ಟ್ ಒಳಗೊಂಡಿವೆ.

ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಹೊಸ ನಿಸ್ಸಾನ್ ಗ್ರಾವೈಟ್ ಫಾರೆಸ್ಟ್ ಗ್ರೀನ್, ಓನಿಕ್ಸ್ ಬ್ಲಾಕ್, ಬ್ಲೇಡ್ ಸಿಲ್ವರ್, ಸ್ಟಾರ್ಮ್ ವೈಟ್ ಮತ್ತು ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ದೊರೆಯಲಿದೆ.

ಲಿಮಿಟೆಡ್ ಲಾಂಚ್ ಎಡಿಷನ್ ಕೂಡ ದೊರೆಯಲಿದ್ದು, ಇದು ಹೆಚ್ಚಿನ ಆರಾಮದಾಯಕತೆ ಮತ್ತು ಅನುಕೂಲಕ್ಕಾಗಿ ಪ್ರೀಮಿಯಂ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಚೆನ್ನೈನಲ್ಲಿ ಉತ್ಪಾದನೆ ಆಗುತ್ತಿದ್ದು, ಭಾರತದಲ್ಲಿ ಸ್ಥಳೀಯವಾಗಿ ತಯಾರಿಸುವ ಮೂಲಕ ದೇಶದ ಮಾರುಕಟ್ಟೆಗೆ ನಿಸ್ಸಾನ್ ತನ್ನ ದೀರ್ಘಕಾಲದ ಬದ್ಧತೆಯನ್ನು ಸಾರಿದೆ.

ಗ್ರಾಹಕರಿಗೆ ಸುಲಭವಾಗಿ ತಲುಪಲು ಮತ್ತು ಉತ್ತಮ ಅನುಭವ ನೀಡಲು ಟಿಯರ್ I ಮತ್ತು ಟಿಯರ್ II ನಗರಗಳಲ್ಲಿ ನಿಸ್ಸಾನ್ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ.

ಗ್ರಾವೈಟ್ ಎಂಬ ಹೆಸರನ್ನು 140 ಕೋಟಿ ಭಾರತೀಯರಿಂದ ಮತ್ತು ದೇಶದ ವೈವಿಧ್ಯತೆಯನ್ನು ಸಾರುವ 19,000 ಪ್ರಾದೇಶಿಕ ಭಾಷೆಗಳು ಹಾಗೂ ಆಚರಣೆಗಳ ಸ್ಫೂರ್ತಿಯಿಂದ ಇಡಲಾಗಿದೆ. ಭಾರತೀಯ ಕುಟುಂಬಗಳ ಬೆಳೆಯುತ್ತಿರುವ ಆಸೆಗಳನ್ನು ಪೂರೈಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವಿಶಾಲವಾದ ಸ್ಥಳಾವಕಾಶ, ಆರಾಮದಾಯಕತೆ ಮತ್ತು ದೈನಂದಿನ ಬಳಕೆಗೆ ಪೂರಕವಾದ ಸೌಲಭ್ಯ ಹೊಂದಿದೆ ಮತ್ತು ಅದ್ಭುತ ರೋಡ್ ಪ್ರೆಸೆನ್ಸ್ ಹೊಂದಿದೆ.

ನಿಸ್ಸಾನ್ ಮತ್ತು ಇನ್ಫಿನಿಟಿ (ಮಧ್ಯಪ್ರಾಚ್ಯ, ಕೆಎಸ್‌ಎ, ಸಿಐಎಸ್ ಮತ್ತು ಭಾರತದ ವಿಭಾಗೀಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು) ಥಿಯರ್ರಿ ಸಬ್ಬಾಗ್ ಅವರು‘ನಿಸ್ಸಾನ್‌ನ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವು ಅತ್ಯಂತ ಪ್ರಮುಖ ಕೇಂದ್ರವಾಗಿದೆ. ಕಳೆದ ಒಂದು ವರ್ಷದಲ್ಲಿ ನಾವು ನಮ್ಮ ಕಾರ್ಯಾಚರಣೆಗಳನ್ನು ಬಲಪಡಿಸುವುದು, ನೆಟ್‌ ವರ್ಕ್ ವಿಸ್ತರಣೆ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯ ಮೂಲಕ ಈ ಮಾರುಕಟ್ಟೆಯ ಬಗ್ಗೆ ಹೆಚ್ಚು ಗಮನ ಇರುವುದನ್ನು ಸಾಬೀತುಪಡಿಸಿದ್ದೇವೆ. ಹೊಸ ನಿಸ್ಸಾನ್ ಗ್ರಾವೈಟ್ ಮೂಲಕ ನಾವು ಕೇವಲ ಒಂದು ಉತ್ಪನ್ನದ ಬಿಡುಗಡೆ ಮಾಡುತ್ತಿರುವುದು ಮಾತ್ರವಲ್ಲ, ಇದು ಭಾರತದಲ್ಲಿ ನಿಸ್ಸಾನ್‌ ನ ನಿರಂತರ ಬೆಳವಣಿಗೆಯ ಆರಂಭದ ಹಂತವಾಗಿದೆ. ಚೆನ್ನೈನಲ್ಲಿರುವ ನಮ್ಮ ಘಟಕದಲ್ಲಿ ಸ್ಥಳೀಯ ಉತ್ಪಾದನೆ ಮಾಡುವ ಮೂಲಕ ಮತ್ತು ಭವಿಷ್ಯದ ಯೋಜನೆಗಳನ್ನು ಹೊಂದುವ ಮೂಲಕ ನಾವು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲು, ಬೆಳೆಯಲು ಮತ್ತು ಮುನ್ನಡೆ ಸಾಧಿಸಲು ಸಜ್ಜಾಗಿದ್ದೇವೆ’ ಎಂದು ತಿಳಿಸಿದರು.

ವಿನ್ಯಾಸ ಮತ್ತು ಸ್ಫೂರ್ತಿ

ಹೊಸ ನಿಸ್ಸಾನ್ ಗ್ರಾವೈಟ್ ನಿಸ್ಸಾನ್‌ ನ ಜಾಗತಿಕ ವಿನ್ಯಾಸ ಶೈಲಿಗೆ ಅನುಗುಣವಾಗಿ ವಿಶಿಷ್ಟ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಇದರ ಎತ್ತರದ ವಿನ್ಯಾಸ, ಬಲಿಷ್ಠವಾದ ಬಾಡಿ ಲೈನ್‌ ಗಳು, ಎದ್ದು ಕಾಣುವ ವೀಲ್ ಆರ್ಚ್‌ ಗಳು ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಭಾರತದ ವೈವಿಧ್ಯಮಯ ರಸ್ತೆಗಳಿಗೆ ಸೂಕ್ತವಾಗಿದೆ.

ಗ್ರಾವೈಟ್ ತನ್ನ ವಿಭಾಗದಲ್ಲಿ ಬಾನೆಟ್‌ ನ ಮೇಲೆ ವಿಶಿಷ್ಟವಾದ 'ಬ್ರ್ಯಾಂಡಿಂಗ್' ಮತ್ತು ಹಿಂಭಾಗದ ಬಾಗಿಲಿನ ಮೇಲೆ ವಿಶಿಷ್ಟ 'ಬ್ಯಾಡ್ಜಿಂಗ್' ಹೊಂದಿರುವ ಏಕೈಕ ವಾಹನವಾಗಿದೆ. ಈ ಬೋಲ್ಡ್ ವಿನ್ಯಾಸವು ಕಾರಿನ ವಿಶಿಷ್ಟತೆಯನ್ನು ಸಾರುವುದಲ್ಲದೆ, ಜನಮಾನಸದಲ್ಲಿ ಸುಲಭವಾಗಿ ಉಳಿಯುವಂತೆ ಮಾಡುತ್ತದೆ.

ನಿಸ್ಸಾನ್‌ ನ ವಿಶಿಷ್ಟ 'ಸಿ' ಆಕಾರದ ವಿನ್ಯಾಸವು ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎದ್ದು ಕಾಣುತ್ತಿದ್ದು, ಬ್ರ್ಯಾಂಡ್ ಅನ್ನು ತಕ್ಷಣವೇ ಗುರುತಿಸುವಂತೆ ಮಾಡುತ್ತದೆ. ಜೊತೆಗೆ ಇದು ವಾಹನಕ್ಕೆ ಪ್ರೀಮಿಯಂ ಮತ್ತು ಸಮಕಾಲೀನ ರೂಪವನ್ನು ಒದಗಿಸುತ್ತದೆ.

ಹೊರಭಾಗದ ಪ್ರಮುಖ ವೈಶಿಷ್ಟ್ಯಗಳು

· ಸಂಪೂರ್ಣ ಎಲ್‌ಇಡಿ ವ್ಯವಸ್ಥೆ.

· ಆಕರ್ಷಕ ಎಲ್‌ಇಡಿ ಹೆಡ್‌ ಲೈಟ್‌ ಗಳು.

· ಕ್ರಿಸ್ಟಲ್ ಎಡ್ಜ್ ಎಲ್‌ಇಡಿ ಟೈಲ್ ಲ್ಯಾಂಪ್‌ ಗಳು.

· ಎಲ್‌ಇಡಿ ಫಾಗ್ ಲ್ಯಾಂಪ್‌ಗಳು.

· ವಿಶಿಷ್ಟ 'ಪಿಯಾನೋ ಬ್ಲಾಕ್' 2ಡಿ ಗ್ರಿಲ್.

·  ಫಂಕ್ಷನಲ್ ರೂಫ್ ರೈಲ್ಸ್.

·  ವಿಶಾಲವಾಗಿ ಬಾಗಿಲುಗಳು.

ನಿಸ್ಸಾನ್ ಗ್ರಾವೈಟ್ ತನ್ನ ವಿಶಾಲವಾದ ಕ್ಯಾಬಿನ್ ಮತ್ತು ವಿನೂತನ ಬದಲಾಯಿಸಬಹುದಾದ ಸೀಟುಗಳ ವ್ಯವಸ್ಥೆಯೊಂದಿಗೆ ಕುಟುಂಬ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ದೈನಂದಿನ ಓಡಾಟ ಮತ್ತು ಸುದೀರ್ಘ ಪ್ರಯಾಣ ಎರಡಕ್ಕೂ ಸರಿಹೊಂದುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಮೂರೂ ಸಾಲುಗಳಲ್ಲಿ ಅತ್ಯುತ್ತಮ ಆರಾಮದಾಯಕತೆಯನ್ನು ನೀಡುತ್ತದೆ.

ಪ್ರೀಮಿಯಂ ಸುಯೆಡ್ ಮತ್ತು ಲೆದರೆಟ್ ಕ್ವಿಲ್ಟೆಡ್ ಸೀಟುಗಳು ಪ್ರಯಾಣದ ಸುಖವನ್ನು ಹೆಚ್ಚಿಸುತ್ತವೆ. ಮೊದಲ ಸಾಲಿನಲ್ಲಿ ಭುಜ ಮತ್ತು ಮೊಣಕೈಗಳಿಗೆ ಹೆಚ್ಚಿನ ಜಾಗವಿದ್ದು, ಎರಡನೇ ಮತ್ತು ಮೂರನೇ ಸಾಲುಗಳಲ್ಲಿ ತಲೆ (ಹೆಡ್ ರೂಮ್) ಮತ್ತು ಮೊಣಕಾಲುಗಳಿಗೆ (ನೀ ರೂಮ್) ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ. ಇದು ಎಲ್ಲಾ ಪ್ರಯಾಣಿಕರಿಗೂ ಆರಾಮದಾಯಕ ಅನುಭವ ನೀಡುತ್ತದೆ.

ಬೂಟ್ ಸ್ಪೇಸ್ (ಸಾಮಾನು ಇರಿಸುವ ಸ್ಥಳ) ವಿಶೇಷತೆಗಳು:

·  5- ಸೀಟರ್ ವ್ಯವಸ್ಥೆಯಲ್ಲಿ 625 ಲೀಟರ್‌ಗಳು

·  6- ಸೀಟರ್ ವ್ಯವಸ್ಥೆಯಲ್ಲಿ 320 ಲೀಟರ್‌ಗಳು

·  7- ಸೀಟರ್ ವ್ಯವಸ್ಥೆಯಲ್ಲಿ 84 ಲೀಟರ್‌ಗಳು

 5-ಸೀಟರ್ ವ್ಯವಸ್ಥೆಯಲ್ಲಿ 625 ಲೀಟರ್‌ಗಳ ಲಗೇಜ್ ಸಾಮರ್ಥ್ಯ ಹೊಂದಿರುವ ಗ್ರಾವೈಟ್ ಅತ್ಯುತ್ತಮ ಪ್ರಾಯೋಗಿಕ ಸೌಲಭ್ಯ ಒದಗಿಸುತ್ತದೆ.

ಮೂರು ಸಾಲುಗಳ ಏಸಿ ವೆಂಟ್‌ ಗಳನ್ನು ಹೊಂದಿರುವ ಟ್ರಾಪಿಕಲೈಸ್ಡ್ ಏಸಿ ವ್ಯವಸ್ಥೆಯು ಇಡೀ ಕ್ಯಾಬಿನ್‌ ನಲ್ಲಿ ಉತ್ತಮ ಗಾಳಿಯ ಸಂಚಾರ ಇರುವಂತೆ ನೋಡಿಕೊಳ್ಳುತ್ತದೆ. ಇದರೊಂದಿಗೆ ಎರಡನೇ ಸಾಲಿಗೆ ಪ್ರತ್ಯೇಕ ಏರ್-ಕಂಡೀಷನಿಂಗ್ ನಿಯಂತ್ರಣಗಳು, ನೆಕ್ ಸಪೋರ್ಟ್‌ ಗಳು, ಮೊದಲ ಸಾಲಿನ ಆರ್ಮ್‌ ರೆಸ್ಟ್ ಒದಗಿಸಲಾಗಿದೆ ಮತ್ತು ಎರ್ಗೋನಾಮಿಕ್ ಆಗಿ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ.

ತಂತ್ರಜ್ಞಾನ ಮತ್ತು ಕನೆಕ್ಟಿವಿಟಿ

ಹೊಸ ನಿಸ್ಸಾನ್ ಗ್ರಾವೈಟ್ ಹೆಚ್ಚಿನ ಸೌಕರ್ಯ ಮತ್ತು ಚಾಲನಾ ಆರಾಮದಾಯಕತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಪ್ರಮುಖ ವೈಶಿಷ್ಟ್ಯಗಳು:

·   ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಹೊಂದಿರುವ 20.32 ಸೆ.ಮೀ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್.

·  17.78 ಸೆಂ.ನೀ ಪೂರ್ಣ ಡಿಜಿಟಲ್ ಅಡ್ವಾನ್ಸ್ಡ್ ಮಲ್ಟಿ ಫಂಕ್ಷನಲ್ ಕ್ಲಸ್ಟರ್.

·  ವೈರ್‌ಲೆಸ್ ಚಾರ್ಜರ್.

·  ಫಾಲೋ ಮಿ ಹೋಮ್ ಸೌಲಭ್ಯ ಹೊಂದಿರುವ ಆಟೋ ಎಲ್‌ಇಡಿ ಹೆಡ್‌ ಲ್ಯಾಂಪ್

·  ವಾಕ್ ಅವೇ ಲಾಕ್ (ಡಬ್ಲ್ಯೂಎಎಲ್) ಮತ್ತು ಅಪ್ರೋಚ್ ಅನ್‌ ಲಾಕ್ (ಎಯುಎಲ್) ಸೌಲಭ್ಯ

·  ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ ಗಳು.

ಪ್ರಮಾಣಿತ ಸಮಗ್ರ ಸುರಕ್ಷತೆ

ಕುಟುಂಬಗಳಿಗೆ ನೆಮ್ಮದಿಯ ಪ್ರಯಾಣ ಸೌಲಭ್ಯ ನೀಡಲು ವಿನ್ಯಾಸಗೊಳಿಸಲಾದ 30+ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಗ್ರಾವೈಟ್ ಅದ್ಭುತ ಸುರಕ್ಷತೆ ಒದಗಿಸುತ್ತದೆ.

ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳು:

·  6 ಏರ್‌ ಬ್ಯಾಗ್‌ ಗಳು

· ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ)

·   ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್)

·  ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ ಎಸ್ ಎ)

· ಬ್ರೇಕ್ ಅಸಿಸ್ಟ್ ಸಿಸ್ಟಮ್ (ಬಿಎಎಸ್)

· ಬಿಡಿ ಜೊತೆಗೆ ಎಬಿಎಸ್

·  ಎಲ್ಲಾ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ರಿಮೈಂಡರ್

ಒಟ್ಟಾರೆಯಾಗಿ, ಈ ವೈಶಿಷ್ಟ್ಯಗಳು ಚಾಲನಾ ಸಂದರ್ಭಗಳಲ್ಲಿ ಹೆಚ್ಚಿನ ಸ್ಥಿರತೆ, ಸೊಗಸಾದ ನಿರ್ವಹಣೆ ಒದಗಿಸುತ್ತವೆ ಮತ್ತು ಪ್ರಯಾಣಿಕರಿಗೆ ಉತ್ತಮ ರಕ್ಷಣೆ ಒದಗಿಸುತ್ತವೆ.

ಬೆಲೆ ವಿವರ:

ವೇರಿಯೆಂಟ್

ಎಕ್ಸ್ ಶೋರೂಮ್ (ರೂ, ಲಕ್ಷಗಳಲ್ಲಿ)

ವಿಸಿಯಾ

₹5,65,000

ಅಸೆಂಟಾ

₹6,59,000

ಎನ್-ಕನೆಕ್ಟಾ

₹7,20,000

ಟೆಕ್ನಾ

₹7,91,000

ಎನ್-ಕನೆಕ್ಟಾ ಎಎಮ್‌ಟಿ

₹7,80,000

ಟೆಕ್ನಾ ಎಎಮ್‌ಟಿ

₹8,49,000