ADVERTISEMENT

ಏಥರ್‌ ಸ್ಕೂಟರ್ ಬೆಲೆ ₹3 ಸಾವಿರ ಹೆಚ್ಚಳ: ಜನವರಿ 1ರಿಂದ ಪರಿಷ್ಕೃತ ದರ ಜಾರಿ

ಪಿಟಿಐ
Published 22 ಡಿಸೆಂಬರ್ 2025, 13:25 IST
Last Updated 22 ಡಿಸೆಂಬರ್ 2025, 13:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್‌ ಎನರ್ಜಿ ತನ್ನ ಸ್ಕೂಟರ್‌ಗಳ ಬೆಲೆಯನ್ನು ₹3 ಸಾವಿರದವರೆಗೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಪರಿಷ್ಕೃತ ದರವು ಜನವರಿ 1ರಿಂದ ಜಾರಿಗೆ ಬರಲಿದೆ.

ತಯಾರಿಕೆ ವೆಚ್ಚದಲ್ಲಿನ ಹೆಚ್ಚಳ ಮತ್ತು ರೂಪಾಯಿ ಮೌಲ್ಯದಲ್ಲಿನ ಇಳಿಕೆಯು ಬೆಲೆ ಏರಿಕೆಗೆ ಕಾರಣ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳ, ಜಾಗತಿಕವಾಗಿ ವಿದ್ಯುತ್‌ ಚಾಲಿತ ವಾಹನಗಳ ಪ್ರಮುಖ ಬಿಡಿಭಾಗಗಳ ಬೆಲೆ ಹೆಚ್ಚಳ ಕೂಡ ದರ ಏರಿಕೆಗೆ ಕಾರಣ ಎಂದು ಹೇಳಿದೆ. 

ಕಂಪನಿಯು 450 ಸೀರೀಸ್‌ನ ಸ್ಕೂಟರ್‌ಗಳು ಮತ್ತು ರಿಟ್ಜಾ ಸ್ಕೂಟರ್‌ನ್ನು ಮಾರಾಟ ಮಾಡುತ್ತಿದೆ. ‘ಎಲೆಕ್ಟ್ರಿಕ್‌ ಡಿಸೆಂಬರ್‌’ ಯೋಜನೆಯ ಅಂಗವಾಗಿ ಆಯ್ದ ನಗರಗಳಲ್ಲಿ ₹20 ಸಾವಿರದವರೆಗೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.