ADVERTISEMENT

ಜ.1ರಿಂದ ಬಿಎಂಡಬ್ಲ್ಯು ಮೋಟೊರಾಡ್‌ ಬೆಲೆ ಏರಿಕೆ

ಪಿಟಿಐ
Published 29 ನವೆಂಬರ್ 2024, 14:03 IST
Last Updated 29 ನವೆಂಬರ್ 2024, 14:03 IST
<div class="paragraphs"><p>ಬಿಎಂಡಬ್ಲ್ಯು ಮೋಟೊರಾಡ್‌ </p></div>

ಬಿಎಂಡಬ್ಲ್ಯು ಮೋಟೊರಾಡ್‌

   

ನವದೆಹಲಿ: ಜರ್ಮನಿಯ ವಾಹನ ತಯಾರಿಕಾ ಕಂಪನಿ ಬಿಎಂಡಬ್ಲ್ಯುನ ದ್ವಿಚಕ್ರ ವಾಹನ ವಿಭಾಗವಾದ ಬಿಎಂಡಬ್ಲ್ಯು ಮೋಟೊರಾಡ್‌, ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಶೇ 2.5ರ ವರೆಗೆ ಏರಿಕೆ ಮಾಡುವುದಾಗಿ ಹೇಳಿದೆ.

ಹೊಸ ದರವು ಜನವರಿ 1ರಿಂದ ಜಾರಿಗೆ ಬರಲಿದೆ. ತಯಾರಿಕಾ ವೆಚ್ಚ ಹೆಚ್ಚಳದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ADVERTISEMENT

ಬಿಎಂಡಬ್ಲ್ಯು ಇಂಡಿಯಾ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಜನವರಿ 1ರಿಂದ ಜಾರಿಗೆ ಬರುವಂತೆ ಶೇ 3ರ ವರೆಗೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಮರ್ಸಿಡೀಸ್‌ ಬೆಂಜ್‌ ಇಂಡಿಯಾ ಸಹ ತನ್ನ ವಾಹನಗಳ ಬೆಲೆಯನ್ನು ಇಷ್ಟೇ ಪ್ರಮಾಣದಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.