ADVERTISEMENT

ಚೀನಾದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ ವಾಹನ ಬೆಲೆ ಏರಿಕೆ

ಪಿಟಿಐ
Published 2 ಜನವರಿ 2026, 14:11 IST
Last Updated 2 ಜನವರಿ 2026, 14:11 IST
   

ನವದೆಹಲಿ: ಚೀನಾದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ, ತನ್ನ ಸೀಲಿಯನ್ 7 ವಾಹನದ ಬೆಲೆಯನ್ನು ಭಾರತದಲ್ಲಿ ಹೆಚ್ಚಳ ಮಾಡಿರುವುದಾಗಿ ಹೇಳಿದೆ.

ಈ ಮಾದರಿಯ ವಾಹನಗಳ ದರವನ್ನು ₹50 ಸಾವಿರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರವು ಗುರುವಾರದಿಂದ ಜಾರಿಗೆ ಬಂದಿದೆ ಎಂದು ಬಿವೈಡಿ ಇಂಡಿಯಾ ತಿಳಿಸಿದೆ. 

ಬಿವೈಡಿ ಇಂಡಿಯಾ ಸೀಲಿಯನ್‌ 7 ಬೆಲೆ ಈ ಮೊದಲು ₹48.9 ಲಕ್ಷ (ಎ‌ಕ್ಸ್‌ ಷೋರೂಂ) ದರ ಇತ್ತು. ಅದು ಈಗ ₹49.4 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.