ಕಾರು ಮಾರಾಟ
ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದ ಮೊದಲ ದಿನವೇ ಕಾರು ಮಾರಾಟ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.
ಗ್ರಾಹಕರು ಡೀಲರ್‌ಗಳನ್ನು ಸಂಪರ್ಕಿಸಿ ಕಾರುಗಳ ಬಗ್ಗೆ ವಿಚಾರಿಸುವುದು ಕಳೆದ 3–4 ವಾರಗಳಿಂದ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿತ್ತು. ನವರಾತ್ರಿಯ ಮೊದಲ ದಿನ ಬಹಳ ಒಳ್ಳೆಯ ರೀತಿಯಲ್ಲಿ ಮಾರಾಟ ನಡೆದಿದೆ ಎಂದು ಆಟೊಮೊಬೈಲ್ ಡೀಲರ್‌ಗಳ ಸಂಘಟನೆಗಳ ಒಕ್ಕೂಟದ (ಎಫ್‌ಎಡಿಎ) ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ತಿಳಿಸಿದ್ದಾರೆ.
‘ಈ ತೆರಿಗೆ ಸುಧಾರಣೆಯ ಪರಿಣಾಮವು ಈ ತಿಂಗಳಿಗೆ, ಈ ಅವಧಿಗೆ ಸೀಮಿತ ಎಂದು ನಾನು ಭಾವಿಸಿಲ್ಲ. ಇದು ಮುಂದಿನ ಕೆಲವು ವರ್ಷಗಳವರೆಗೆ ನಮಗೆ ಪ್ರಯೋಜನ ತಂದುಕೊಡಲಿದೆ’ ಎಂದು ಅವರು ಹೇಳಿದ್ದಾರೆ.
ನವರಾತ್ರಿಯ ಮೊದಲ ದಿನ ಎಷ್ಟು ವಾಹನಗಳ ಮಾರಾಟ ಆಗಿದೆ ಎಂಬ ವಿವರವನ್ನು ಅವರು ನೀಡಿಲ್ಲ.
ಸೋಮವಾರ ಕಾರು ಮಾರಾಟದಲ್ಲಿ ಶೇ 400ರಷ್ಟು ಏರಿಕೆ ಆಗಿದೆ ಎಂದು ಬಳಸಿದ ಕಾರುಗಳ ಮಾರಾಟ ವೇದಿಕೆ ಕಾರ್ಸ್24 ಹೇಳಿದೆ. ದೆಹಲಿ, ಅಹಮದಾಬಾದ್, ಬೆಂಗಳೂರು, ಪುಣೆ ಮತ್ತು ಮುಂಬೈನಲ್ಲಿ ಹೆಚ್ಚಿನ ಕಾರುಗಳ ಮಾರಾಟ ಕಂಡುಬಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.