ADVERTISEMENT

ಯಲಹಂಕದಲ್ಲಿ ಕಿಯಾ ಮೋಟರ್ಸ್‌ ಷೋರೂಂ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 19:51 IST
Last Updated 9 ಸೆಪ್ಟೆಂಬರ್ 2020, 19:51 IST
ಕಿಯಾ ಮೋಟರ್ಸ್‌ನ ಯಲಹಂಕದಲ್ಲಿನ ಹೊಸ ಷೋರೂಂ
ಕಿಯಾ ಮೋಟರ್ಸ್‌ನ ಯಲಹಂಕದಲ್ಲಿನ ಹೊಸ ಷೋರೂಂ   

ಬೆಂಗಳೂರು: ಕಿಯಾ ಮೋಟರ್ಸ್‌ ಕಂಪನಿಯ ಅಧಿಕೃತ ವಿತರಕ ಎಪಿಟೊಮ್ ಆಟೊಮೊಬೈಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಯಲಹಂಕದಲ್ಲಿ ಬುಧವಾರ ಹೊಸ ಷೋರೂಂ ಉದ್ಘಾಟನೆ ಮಾಡಿದೆ.

ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೋಖಿಯುನ್‌ ಶಿಮ್ ಅವರು ಷೋರೂಂ ಉದ್ಘಾಟಿಸಿದರು. ರಾಜ್ಯದಲ್ಲಿ ಕಂಪನಿಯ ಮೂರನೇ ಷೋರೂಂ ಇದಾಗಿದೆ. ಈ ಷೋರೂಂ 30 ಸಾವಿರ ಚದರ ಅಡಿ ವಿಸ್ತೀರ್ಣವಾಗಿದೆ.

ಕಾರ್ಯಾಚರಣೆ ಆರಂಭಿಸಿದ ಮೊದಲ ವರ್ಷವೇ 1000 ಕಾರುಗಳನ್ನು ವಿತರಿಸಲಾಗಿದೆ. ನಮ್ಮ ಷೋರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಗಳನ್ನು ನೀಡುವುದು ಆದ್ಯತೆಯಾಗಿದೆ ಎಂದು ಎಪಿಟೊಮ್ ಆಟೊಮೊಬೈಲ್ಸ್‌ನ ಡೀಲರ್‌ ಪ್ರಿನ್ಸಿಪಲ್‌ ಕಿಶೋರ್‌ ಜಿ. ರೆಡ್ಡಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.