ADVERTISEMENT

ಮಗನ ಆಸೆ ಈಡೇರಿಸಲು 4 ಚಕ್ರದ ವಾಹನ ತಯಾರಿಸಿದ ತಂದೆ: ಆನಂದ್ ಮಹೀಂದ್ರಾ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2021, 9:29 IST
Last Updated 22 ಡಿಸೆಂಬರ್ 2021, 9:29 IST
ದತ್ತಾತ್ರೇಯ ಲೋಹರ್ ತಯಾರಿಸಿರುವ ನಾಲ್ಕು ಚಕ್ರದ ವಾಹನ
ದತ್ತಾತ್ರೇಯ ಲೋಹರ್ ತಯಾರಿಸಿರುವ ನಾಲ್ಕು ಚಕ್ರದ ವಾಹನ   

ಮುಂಬೈ:ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರುಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದನಾಲ್ಕು ಚಕ್ರದ ವಾಹನವೀಗ ಆನಂದ್‌ ಮಹೀಂದ್ರಅವರನ್ನು ಬೆರಗಾಗುವಂತೆ ಮಾಡಿದೆ.

ಈ ವಾಹನವನ್ನು ಕೇವಲ ₹60,000 ಗಳಲ್ಲಿ ತಯಾರಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿರುವಂತೆಈ ನಾಲ್ಕು ಚಕ್ರದ ವಾಹನದಲ್ಲಿಯೂಕಿಕ್‌–ಸ್ಟಾರ್ಟ್‌ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.

ಈ ವಾಹನ ಮತ್ತು ಅದರ ತಯಾರಕದತ್ತಾತ್ರೇಯ ಲೋಹರ್ ಅವರನ್ನುಒಳಗೊಂಡಿರುವ45 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ ಅನ್ನು ಆನಂದ್‌ ಮಹೀಂದ್ರಾ ಟ್ವಿಟರ್‌ನಲ್ಲಿಹಂಚಿಕೊಂಡಿದ್ದಾರೆ.

ADVERTISEMENT

‘ನಮ್ಮ ಜನರ ಜಾಣ್ಮೆ ಮತ್ತುಸಾಮರ್ಥ್ಯಗಳ ಕುರಿತುಮೆಚ್ಚುಗೆ ವ್ಯಕ್ತಪಡಿಸುವುದನ್ನುನಾನು ಎಂದಿಗೂ ನಿಲ್ಲಿಸುವುದಿಲ್ಲಎಂಬುದಾಗಿಆನಂದ್‌ ಮಹೀಂದ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲೋಹರ್ ಅವರಿಗೆಬೊಲೆರೊ ವಾಹನವನ್ನು ನೀಡುವುದಾಗಿಯೂ ಮಹೀಂದ್ರಾ ತಿಳಿಸಿದ್ದಾರೆ.

ದತ್ತಾತ್ರೇಯ ಲೋಹರ್ ಅವರು ತಮ್ಮ ಮಗನ ಆಸೆಯನ್ನು ಈಡೇರಿಸಲು ಈವಾಹನವನ್ನು ತಯಾರಿಸಿದ್ದಾರೆ.ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ಕಮ್ಮಾರರ ಕುಟುಂಬಕ್ಕೆಲೋಹರ್ ಸೇರಿದವರುಎಂದು ಯೂಟ್ಯೂಬ್ ಚಾನೆಲ್ ‘ಹಿಸ್ಟೋರಿಕಾನೊ’ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.