ಮಹೀಂದ್ರ
ನವದೆಹಲಿ: ಬ್ರಿಟನ್‌ಗೆ ವಿದ್ಯುತ್‌ಚಾಲಿತ ವಾಹನಗಳನ್ನು (ಇ.ವಿ) ರಫ್ತು ಮಾಡಲು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಯೋಜಿಸಿದೆ.
ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್‌ಟಿಒ) ವ್ಯಾಪಾರದ ಅವಕಾಶಗಳು ಹೆಚ್ಚಲಿವೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪನ ನಿರ್ದೇಶಕ ಅನೀಶ್ ಶಾ ಹೇಳಿದ್ದಾರೆ.
2030ರ ವೇಳೆಗೆ ತನ್ನ ಒಟ್ಟು ವಾಹನಗಳ ಮಾರಾಟದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಪಾಲು ಶೇ 30ರಷ್ಟು ಆಗಬೇಕು ಎಂದು ಕಂಪನಿಯು ಬಯಸಿದೆ. ಇ.ವಿ ರಫ್ತಿನಿಂದ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಉದ್ದೇಶಿಸಲಾಗಿದೆ. ಈ ಒಪ್ಪಂದವು ದೇಶದಲ್ಲಿ ನಾವೀನ್ಯತೆಗೆ ಮತ್ತು ತಯಾರಿಕೆಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದವು ಬ್ರಿಟನ್ ಸರಕುಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆಯಲಿದೆ ಮತ್ತು ದೇಶದ ರಫ್ತಿನ ಅವಕಾಶಗಳ ಹೆಚ್ಚಳಕ್ಕೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.