ADVERTISEMENT

50 ಸಾವಿರ ವಾಹನಗಳು ಗುಜರಿಗೆ: ಕೇಂದ್ರ ಸರ್ಕಾರ

ಪಿಟಿಐ
Published 6 ಜನವರಿ 2024, 0:08 IST
Last Updated 6 ಜನವರಿ 2024, 0:08 IST
   

ನವದೆಹಲಿ: ‘ರಾಷ್ಟ್ರೀಯ ವಾಹನ ಗುಜರಿ ನೀತಿ’ ಅಡಿ  ಇದುವರೆಗೆ 49,770 ವಾಹನಗಳನ್ನು ಗುಜರಿಗೆ ಹಾಕಲಾಗಿದೆ. ಪ್ರಸ್ತಕ್ತ ಹಣಕಾಸು ವರ್ಷದಲ್ಲಿ 38,200 ವಾಹನಗಳನ್ನು ಗುಜರಿಗೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಈ ಕುರಿತು ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಕಾರ್ಯದರ್ಶಿ ಅನುರಾಗ್ ಜೈನ್ ಅವರು, ‘ವಾಹನ ಗುಜರಿ ನೀತಿಯಡಿ ದೇಶದಲ್ಲಿ 44 ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಗುಜರಿಗೆ ಹಾಕುವ ವಾಹನಗಳಿಗೆ ರಿಯಾಯಿತಿ ಮತ್ತು ವಾಹನಗಳ ಮೇಲಿನ ತೆರಿಗೆ ವಿನಾಯಿತಿ ನೀಡುವುದಾಗಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ’ ಎಂದು ಹೇಳಿದರು. 

ಈ ನೀತಿಯಿಂದಾಗಿ ವಾಹನಗಳ ಖರೀದಿ ಶೇ 8ರಷ್ಟು ಹೆಚ್ಚಳವಾಗಲಿದ್ದು, ದೇಶದ ಜಿಡಿಪಿಗೆ ಶೇ 0.5ರಷ್ಟು ಕೊಡುಗೆ ನೀಡಲಿದೆ. ಆದಾಗ್ಯೂ, ವಾಹನಗಳ ತಯಾರಕ ಸಂಸ್ಥೆಗಳು ವಾಹನಗಳ ಗುಜರಿ ನೀತಿಗೆ ಅನಿರ್ಬಂಧಿತ ಸಹಕಾರ ನೀಡಬೇಕು ಎಂದು ಸೂಚಿಸಿದರು. 

ADVERTISEMENT

2021ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಾಹನಗಳ ಗುಜರಿ ನೀತಿಯನ್ನು ಜಾರಿಗೊಳಿಸಿದ್ದರು. ಈ ನೀತಿಯಿಂದ ಚಾಲನೆಗೆ ಅರ್ಹವಿಲ್ಲದ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಗುಜರಿಗೆ ಹಾಕಲು ನೆರವಾಗಲಿದೆ. ಅಲ್ಲದೆ, ದೇಶದ ಆರ್ಥಿಕತೆಗೂ ಪೂರಕವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.