ADVERTISEMENT

ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 13ರಷ್ಟು ಇಳಿಕೆ

ಪಿಟಿಐ
Published 14 ಜನವರಿ 2022, 16:07 IST
Last Updated 14 ಜನವರಿ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನ ಸಗಟು ಮಾರಾಟವು 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಡಿಸೆಂಬರ್‌ನಲ್ಲಿ ಶೇ 13ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

2020ರ ಡಿಸೆಂಬರ್‌ನಲ್ಲಿ 2.52 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಅಗಿದ್ದವು. 2021ರ ಡಿಸೆಂಬರ್‌ನಲ್ಲಿ 2.19 ಲಕ್ಷಕ್ಕೆ ಇಳಿಕೆ ಆಗಿದೆ.

ದ್ವಿಚಕ್ರ ವಾಹನ ಮಾರಾಟವು ಶೇ 11ರಷ್ಟು ಇಳಿಕೆ ಆಗಿದ್ದು 10.06 ಲಕ್ಷಕ್ಕೆ ತಲುಪಿದೆ. 2020ರ ಡಿಸೆಂಬರ್‌ನಲ್ಲಿ 11.27 ಲಕ್ಷ ಇತ್ತು. ಮೋಟರ್‌ಸೈಕಲ್‌ ಮಾರಾಟ ಶೇ 2 ರಷ್ಟು ಇಳಿಕೆ ಆಗಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌–ಡಿಸೆಂಬರ್ ಅವಧಿಯಲ್ಲಿ ಪ್ರಯಾಣಿಕ ವಾಹನ ಮಾರಾಟವು 8.97 ಲಕ್ಷದಿಂದ 7.61 ಲಕ್ಷಕ್ಕೆ ಶೇ 15ರಷ್ಟು ಇಳಿಕೆ ಆಗಿದೆ. ಈ ಅವಧಿಯಲ್ಲಿ ದ್ವಿಚಕ್ರ ವಾಹನ ಮಾರಾಟ ಶೇ 25ರಷ್ಟು ಇಳಿಕೆ ಆಗಿದೆ. ಎಲ್ಲಾ ವಿಭಾಗಗಳ ಮಾರಾಟವು 59.46 ಲಕ್ಷದಿಂದ 46.36 ಲಕ್ಷಕ್ಕೆ ಶೇ 22ರಷ್ಟು ಇಳಿಕೆ ಕಂಡಿದೆ ಎಂದು ಒಕ್ಕೂಟವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.