ಮಿಲಾ ಮಾಗೀ
ಇನ್‌ಸ್ಟಾಗ್ರಾಂ ಚಿತ್ರ
ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶ್ವಸುಂದರಿ ಸ್ಪರ್ಧೆಗೆ ವಿವಾದದ ಕರಿನೆರಳು ಆವರಿಸಿದ್ದು, ಇದೀಗ ಸ್ಪರ್ಧಿಯೊಬ್ಬರು ಕಣದಿಂದ ಹಿಂದೆ ಸರಿಯುವ ಮೂಲಕ ಹೊಸ ವಿವಾದ ಸೃಷ್ಟಿಯಾಗಿದೆ.
‘ನಾನು ವೇಶ್ಯೆ ಎಂದು ಭಾವಿಸುವ ರೀತಿ’ ವರ್ತಿಸಿದ್ದಾರೆ ಎಂದು ಆರೋಪಿಸಿ ಮಿಸ್ ಇಂಗ್ಲೆಂಡ್ 2024ರ ವಿಜೇತೆ ಮಿಲಾ ಮಾಗೀ ಅವರು ವಿಶ್ವ ಸುಂದರಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಮೇ 7ರಂದು ಹೈದರಾಬಾದ್‌ಗೆ ಬಂದಿದ್ದ ಅವರು ಇಂಗ್ಲೆಂಡ್‌ಗೆ ಮರಳಿದ್ದಾರೆ.
ಬ್ರಿಟನ್‌ಗೆ ಮರಳಿದ ಬಳಿಕ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿರುವ ಮಿಲಾ, ‘ಸ್ಪರ್ಧೆಯ ವಾತಾವರಣದಿಂದ ನನಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಿಲಾ ಆರೋಪಗಳನ್ನು ಸ್ಪರ್ಧೆಯ ಆಯೋಜಕರು ನಿರಾಕರಿಸಿದ್ದಾರೆ.
‘ಆತಿಥ್ಯದ ಕೊರತೆ ಮತ್ತು ಸ್ಪರ್ಧಿಗಳಿಗೆ ಗೌರವ ತೋರಿಲ್ಲ. ಅವರು ನಮ್ಮನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಿದ್ದರು. ನನಗೆ ವೇಶ್ಯೆಯಂತೆ ಭಾಸವಾಯಿತು’ ಎಂದು ಮಿಲಾ ಆರೋಪಿಸಿದ್ದಾರೆ.
ಅನಾರೋಗ್ಯಕ್ಕೆ ತುತ್ತಾದ ತಾಯಿಯನ್ನು ನೋಡಲು ಮಿಲಾ ಮಾಗೀ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಆಯೋಜಕರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.