ADVERTISEMENT

ಸಂಕ್ರಮಣಕ್ಕೆ ತಿಲಾಭರಣ..

ಇಮಾಮ್‌ಹುಸೇನ್‌ ಗೂಡುನವರ
Published 12 ಜನವರಿ 2024, 23:25 IST
Last Updated 12 ಜನವರಿ 2024, 23:25 IST
ಪ್ರಾಜಕ್ತಾ ಬೇಡೇಕರ್‌ ಎಳ್ಳು ಬಳಸಿ ತಯಾರಿಸಿದ ಚಿನ್ನಾಭರಣ
ಪ್ರಾಜಕ್ತಾ ಬೇಡೇಕರ್‌ ಎಳ್ಳು ಬಳಸಿ ತಯಾರಿಸಿದ ಚಿನ್ನಾಭರಣ   

ಮಕರ ಸಂಕ್ರಾಂತಿ ಮತ್ತೆ ಸಂಭ್ರಮ ಹೊತ್ತು ತಂದಿದೆ. ಈ ಹಬ್ಬದಲ್ಲಿ ನಾವೆಲ್ಲರೂ ‘ಎಳ್ಳು’ ಸವಿದು ಸಂಭ್ರಮಿಸುತ್ತೇವೆ. ಆಸಕ್ತಿಕರ ಸಂಗತಿಯೆಂದರೆ, ಬೆಳಗಾವಿಯಲ್ಲಿ ಉದ್ಯಮಿ ಪ್ರಾಜಕ್ತಾ ಬೇಡೇಕರ್‌ ಅವರು ಅದೇ ಎಳ್ಳಿನಿಂದ ಬಗೆಬಗೆಯ ವಿನ್ಯಾಸಗಳ ವೈವಿಧ್ಯಮಯ ಆಭರಣ ತಯಾರಿಸುತ್ತಾರೆ. ಅವು ದೇಶದ ಗಡಿಯನ್ನೂ ದಾಟಿವೆ.

ಪ್ರತಿಬಾರಿ ಸಂಕ್ರಮಣದ ಸಂದರ್ಭದಲ್ಲಿ ಪ್ರಾಜಕ್ತಾ ಅವರು ಎಳ್ಳು ಬಳಸಿ, ಸಾಂಪ್ರದಾಯಿಕ ಶೈಲಿಯಲ್ಲಿ ನೆಕ್‌ಲೇಸ್‌, ಸರ, ಬ್ರೆಸ್‌ಲೇಟ್‌, ಬಳೆ, ಉಂಗುರ, ಕಿವಿಯೊಲೆ, ಮಂಗಳಸೂತ್ರ, ಸೊಂಟದ ಪಟ್ಟಿ, ಕಿರೀಟ ಮುಂತಾದವುಗಳನ್ನು ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಸಿಹಿ ಖಾದ್ಯದಲ್ಲೇ ಸಿದ್ಧಪಡಿಸಿ ಕೊಡುತ್ತಾರೆ.

‘ಆಭರಣ ತಯಾರಿಕೆಗೆ ನಾನು ಸಿಹಿಖಾದ್ಯದೊಂದಿಗೆ ಆಲಂಕಾರಿಕ ವಸ್ತುಗಳನ್ನು ಬಳಸುತ್ತೇನೆ. ಗ್ರಾಹಕರು ಇಚ್ಛಿಸಿದರೆ, ಚಿನ್ನ ಮತ್ತು ಎಳ್ಳು ಬಳಸಿ ಆಕರ್ಷಕವಾದ ಆಭರಣ ಸಿದ್ಧಪಡಿಸುತ್ತೇನೆ. ಇದಕ್ಕೆ ರಾಸಾಯನಿಕ ಅಂಟು ಬಳದ ಕಾರಣ  ಜನ ನಿರಾತಂಕವಾಗಿ ಧರಿಸಬಹುದು. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲ್ಲ’ ಎನ್ನುತ್ತಾರೆ ಪ್ರಾಜಕ್ತಾ.

ADVERTISEMENT

‘ಮಗಳಿಗಾಗಿ 19 ವರ್ಷಗಳ ಹಿಂದೆ ಮೊದಲ ಬಾರಿ ಸಿಹಿಖಾದ್ಯ ಬಳಸಿ ತಯಾರಿಸಿದ್ದ ಆಭರಣವನ್ನು ಹಲವರು ಇಷ್ಟಪಟ್ಟಿದ್ದರು. ತಮಗೂ ಇಂಥದ್ದು ತಯಾರಿಸಿಕೊಡಲು ಕೋರಿದ್ದರು. ದುಬೈ, ಸಿಂಗಾಪುರ, ಆಸ್ಟ್ರೇಲಿಯಾದ ಕೆಲವರು ಭಾರತಕ್ಕೆ ಸಂದರ್ಭದಲ್ಲಿ ನನ್ನ ಬಳಿ ಆಭರಣಗಳನ್ನು ಖರೀದಿಸುತ್ತಾರೆ. ಈ ಶ್ರೀಲಂಕಾದ ‍‍ಪ್ರಜೆಯೊಬ್ಬರು ಖರೀದಿಸಿದ್ದಾರೆ’ ಎಂದು ಅವರು ಹೇಳಿದರು.

‘ಈ ಆಭರಣ ಸಂಕ್ರಮಣದಲ್ಲಷ್ಟೇ ಬಳಸಲಾಗುತ್ತದೆ. ಸರಿಯಾದ ರೀತಿ ಬಳಸಿದರೆ, ನಾಲ್ಕೈದು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಆಭರಣಗಳ ದರ ₹ 250 ರಿಂದ ₹2 ಸಾವಿರದವರೆಗೆ ಇದೆ. ದೀಪಾವಳಿಯಿಂದ ಸಂಕ್ರಮಣದವರೆಗೆ ಈ ಕೆಲಸ ಮಾಡುತ್ತೇನೆ’ ಎಂದರು.

ಪ್ರಾಜಕ್ತಾ ಬೇಡೇಕರ್‌ ಎಳ್ಳು ಬಳಸಿ ತಯಾರಿಸಿದ ಚಿನ್ನಾಭರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.