ಆಚಾರ್ಯ ಬಾಲಕೃಷ್ಣ ಹಾಗೂ ಸ್ವಾಮಿ ರಾವ್‌ದೇವ್ | ಚಿತ್ರ ಕೃಪೆ: ಜನ್‌ಸತ್ತಾ
ಪತಂಜಲಿ ಆಯುರ್ವೇದ ಎನ್ನುವುದು ಭಾರತದ ಅತ್ಯಂತ ಯಶಸ್ಸಿನ ಕಥೆಗಳಲ್ಲಿ ಒಂದು. ಇದರ ಸಂಪೂರ್ಣ ಶ್ರೇಯವು ಸ್ವಾಮಿ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರ ನಾಯಕತ್ವಕ್ಕೆ ಸಲ್ಲುತ್ತದೆ. ಇವರ ಜಂಟಿ ಪ್ರಯತ್ನದಿಂದಾಗಿ ಆರೋಗ್ಯಕರ, ಸ್ವತಂತ್ರ ಭಾರತಕ್ಕೆ ನಾಂದಿ ಹಾಡುವ ಮೂಲಕ ವ್ಯವಹಾರ ಕ್ಷೇತ್ರವನ್ನು ಮರು ವ್ಯಾಖ್ಯಾನಿಸಿದ್ದಾರೆ.
ಮಾರುಕಟ್ಟೆ ಉತ್ಪನ್ನಗಳನ್ನೂ ಮೀರಿದ ದೃಷ್ಟಿಕೋನ ಸ್ವಾಮಿ ರಾಮ್‌ದೇವ್ ಅವರದ್ದು. ಅವರು ಆರೋಗ್ಯವಂತ ಭಾರತವನ್ನು ಕಟ್ಟುವ ಮಹದುದ್ದೇಶ ಹೊಂದಿದ್ದಾರೆ. ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಯೋಗಕ್ಷೇಮದತ್ತ ಅವರ ಒಲವು, ಭಾರತೀಯ ಮೌಲ್ಯ ಹಾಗೂ ಸಂಪ್ರದಾಯಗಳಾಧಾರಿತ ಜೀವನಶೈಲಿ ಅಳವಡಿಸಿಕೊಳ್ಳಲಿಚ್ಛಿಸುವ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. ಪತಂಜಲಿ ಮೂಲಕ ವಿದೇಶಿ ಉತ್ಪನ್ನಗಳ ಮೇಲಿನ ಭಾರತೀಯರ ಅವಲಂಬನೆ ಕಡಿಮೆ ಮಾಡಿ ದೇಶವನ್ನು ಆರೋಗ್ಯ ಮತ್ತು ಸ್ವಾಸ್ಥ್ಯದಲ್ಲಿ ಸ್ವಾವಲಂಬಿಯಾಗುವ ಯೋಜನೆಯನ್ನು ಸ್ವಾಮಿ ರಾಮ್‌ದೇವ್ ಹೊಂದಿದ್ದಾರೆ.
ಪತಂಜಲಿಯ ಕಾರ್ಯಾಚರಣೆ ಮತ್ತು ಕಾರ್ಯಯೋಜನೆಗಳನ್ನು ಆಚಾರ್ಯ ಬಾಲಕೃಷ್ಣ ಅವರು ಮುನ್ನಡೆಸುತ್ತಾರೆ. ಆಯುರ್ವೇದ ಕುರಿತು ಅವರಿಗಿರುವ ಅಪಾರ ಜ್ಞಾನ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಲ್ಲಿನ ಬದ್ಧತೆಯ ಪರಿಣಾಮ ನಂಬಿಕೆಗರ್ಹ ಉತ್ಪನ್ನಗಳನ್ನು ಹೊರತರಲು ಕಾರಣವಾಗಿದೆ. ಬಾಲಕೃಷ್ಣ ಅವರಲ್ಲಿರುವ ಪ್ರಾಯೋಗಿಕ ಜ್ಞಾನ ಮತ್ತು ವಿಶ್ವಾಸಾರ್ಹತೆ ಕಾಪಾಡುವ ಅವರ ತುಡಿತವು ಪತಂಜಲಿಯ ಹಾದಿಯಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಬಲಿಷ್ಠ ವ್ಯವಹಾರ ಮಾದರಿಯನ್ನಾಗಿ ರೂಪುಗೊಂಡಿದೆ.
ಸ್ವಾಮಿ ರಾಮ್‌ದೇವ್ ಪಯಣದಲ್ಲಿ ಮೌಲ್ಯಯುತ ಪಾಠ ತುಂಬಿದೆ. ಅವರ ದೃಢನಿರ್ಣಯ, ಆತ್ಮವಿಶ್ವಾಸ ಹಾಗೂ ದೂರದೃಷ್ಟಿಯೆಡಗಿನ ಬದ್ಧತೆಯು ಅವರ ಸಾಧನೆಗಳೇ ಆಗಿವೆ. ವೈಯಕ್ತಿಕ ನಂಬಿಕೆ ಮತ್ತು ತತ್ವಗಳಿಗೆ ಪ್ರಾಮಾಣಿಕ ಹಾಗೂ ಸ್ಥಿರವಾಗಿರುವುದು ಬಹಳಾ ಮುಖ್ಯ. ಸ್ವಾಮಿ ರಾಮ್‌ದೇವ್ ಅವರು ತಮ್ಮ ಜೀವನದುದ್ದಕ್ಕೂ ನಿಸರ್ಗ ಪೂರಕವಾದ ಜೀವನ ಮತ್ತು ಸ್ವಾವಲಂಬಿಯನ್ನು ಪ್ರಚಾರ ಮಾಡುತ್ತಲೇ ಬಂದಿದ್ದಾರೆ.
ವ್ಯವಹಾರದ ಕುಶಾಗ್ರಮತಿ ಮತ್ತು ಧಾರ್ಮಿಕ ಒಳನೋಟದ ಸಂಯೋಜನೆಯು ಪತಂಜಲಿಯ ನಾಯಕತ್ವವು ಪ್ರಕರವಾಗಿ ಕಾಣುವಂತೆ ಮಾಡುತ್ತಿದೆ. ಸ್ವಾಮಿ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಆಧುನಿಕ ಯುಗದಲ್ಲಿ ಯೋಗ ಮತ್ತು ಆಯುರ್ವೇದವನ್ನು ಒಗ್ಗೂಡಿಸಿ ವ್ಯಾವಹಾರದ ಅಭ್ಯಾಸವೆಂಬಂತೆ ಬಿಂಬಿಸಿದ್ದಾರೆ. ಈ ವಿನೂತನ ಜೋಡಿಯು ಪತಂಜಲಿಯನ್ನು ಸೃಷ್ಟಿಸಿ, ಅದರ ಮೂಲಕ ಆರೋಗ್ಯ, ಸುಸ್ಥಿರ ಮತ್ತು ಸ್ವಾವಲಂಭಿಯ ಮೌಲ್ಯಗಳುಳ್ಳ ಹಲವು ಉತ್ಪನ್ನಗಳನ್ನು ಹೊರತಂದಿದೆ.
ಸ್ವಾಮಿ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ವ್ಯಾಪಾರ ಎನ್ನುವುದನ್ನು ಲಾಭದಾಯಕವಾಗಿಯೂ ಹಾಗೂ ಸಮಾಜಕ್ಕೆ ಒಳಿತನ್ನು ಸೃಷ್ಟಿಸುವ ಮಾರ್ಗವಾಗಿಯೂ ನಡೆಸಬಹುದು ಎಂಬುದನ್ನು ತೋರಿಸಿಕೊಡುವ ಮೂಲಕ ಈವರೆಗೂ ಇದ್ದ ತಪ್ಪು ಕಲ್ಪನೆಯನ್ನು ತೊಡೆದುಹಾಕಿದ್ದಾರೆ. ಪತಂಜಲಿ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯವಾಗಿದೆ. ರೈತರಿಗೆ ನೆರವು ಹಾಗೂ ಸರ್ವರ ಬದುಕಿನಲ್ಲಿ ಆರೋಗ್ಯ ತರುವ ನಿಟ್ಟಿನಲ್ಲಿ ಉತ್ತೇಜಿಸಿದ್ದಾರೆ. ನಿಸರ್ಗ ಮತ್ತು ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಿರುವ ಪತಂಜಲಿಯು ಭಾರತದಲ್ಲಿ ಕ್ರಾಂತಿಯನ್ನುಂಟು ಮಾಡಿದೆ.
ಲೋಕೋಪಕಾರ ಕಾರ್ಯಗಳಲ್ಲೂ ಪತಂಜಲಿಯ ಬದ್ಧತೆ ಅನನ್ಯವಾಗಿದ್ದು, ಸಮಾಜ ಕಾರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ನೆರವಾಗಿದೆ. ಯಾವುದೇ ವ್ಯಾಪಾರದ ಲಾಭವು ಸಮುದಾಯದ ಆರೋಗ್ಯಕ್ಕೆ ಪೂರಕವಾಗಿರಬೇಕೇ ಹೊರತು, ಲಾಭ ಹೆಚ್ಚಿಸುವ ಉದ್ದೇಶವಾಗಿರಬಾರದು ಎಂಬ ನಂಬಿಕೆಯನ್ನು ಸ್ವಾಮಿ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಹೊಂದಿದ್ದಾರೆ. ಇವರ ಈ ದೂರದೃಷ್ಟಿಯ ಫಲವಾಗಿ ಪತಂಜಲಿಯು ಭಾರತದ ಆರ್ಥಿಕತೆ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ಒಂದು ಬಲವಾಗಿ ಮುನ್ನುಗ್ಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.