
ಡಿಸೆಂಬರ್ 10, 2025:
ಭಾರತದ ಪ್ರತಿಯೊಬ್ಬ ವಧು ತನ್ನದೇ ಆದ ಭಾವಲೋಕವನ್ನು ತನ್ನೊಂದಿಗೆ ಹೊತ್ತುಕೊಂಡು ಸಾಗುತ್ತಾಳೆ. ಅವಳು ಬೆಳೆಯುವುದರೊಂದಿಗೆ ನೋಡಿದ ಸಂಸ್ಕಾರಗಳು, ಬೆಳೆದು ಬಂದ ಸಂಸ್ಕೃತಿ, ಅವಳ ಹೃದಯಕ್ಕೆ ತುಂಬ ಆಪ್ತವಾಗಿರುವ ಸುಂದರ ನೆನಪುಗಳು, ಅವಳ ಬದುಕಿನ ಅತ್ಯಂತ ಮಹತ್ವದ ಹಾಗೂ ಸುಂದರ ದಿನಗಳಲ್ಲಿ ಚಿನ್ನಾಭರಣಗಳು ಅವಳ ಸುಂದರ ವ್ಯಕ್ತಿತ್ವದ ಭಾಗವಾಗಿರುತ್ತವೆ.
ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಚೇನ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ವಧುವಿನ ಆಭರಣಗಳ ಮಹತ್ವವನ್ನು ಬಹಳ ಹಿಂದಿನಿಂದಲೂ ಚೆನ್ನಾಗಿ ಅರ್ಥಮಾಡಿಕೊಂಡು ಬರುತ್ತಿದೆ. ವಧುವಿನ ಶ್ರೇಣಿಯು ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ಕುಶಲತೆಯಿಂದ ಸಂಗ್ರಹಿಸಿದ, ರೂಪಿಸಿದ ಮತ್ತು ಅಭಿವೃದ್ಧಿಪಡಿಸಿರುವ ವಿನ್ಯಾಸಗಳನ್ನು ಒಂದೆಡೆ ಸೇರಿಸುತ್ತದೆ. ಪ್ರತಿಯೊಬ್ಬ ವಧುವಿನ ಸಂಪ್ರದಾಯಗಳನ್ನು ಗೌರವಿಸುವ ಶುದ್ಧತೆ, ಉದ್ದೇಶ ಮತ್ತು ಕರಕುಶಲತೆಯಿಂದ ತಯಾರಿಸಿದ ಆಭರಣಗಳನ್ನು ಖಚಿತಪಡಿಸುತ್ತದೆ. ವಧುವಿನ ಕರಕುಶಲತೆಯಲ್ಲಿ ಆಳವಾದ ಪರಿಣತಿಯೊಂದಿಗೆ, ಮಲಬಾರ್ ಬ್ರ್ಯಾಂಡ್ ದೇಶದಾದ್ಯಂತ ವಧುಗಳ ವಿಭಿನ್ನ ಸಂಪ್ರದಾಯಗಳನ್ನು ಗೌರವಿಸುವ ವಿನ್ಯಾಸಗಳನ್ನು ರಚಿಸುವಲ್ಲಿ ಸರಿಸಾಟಿಯಿಲ್ಲದ ಪರಂಪರೆಯನ್ನು ಕಾಯ್ದುಕೊಂಡು ಬರುತ್ತಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಇಂದು ತನ್ನ ಪ್ರಮುಖ ಬ್ರೈಡ್ಸ್ ಆಫ್ ಇಂಡಿಯಾ (ಭಾರತದ ವಧುಗಳ) ಅಭಿಯಾನದ 15ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನವಾಗಿದೆ. ಈ ವರ್ಷದ ಆವೃತ್ತಿಯು 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದೆ. ಇವರಲ್ಲಿ- ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್‌ಟಿಆರ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಅನಿಲ್ ಕಪೂರ್, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ್ ಮತ್ತಿತರ ಖ್ಯಾತನಾಮರು ಸೇರಿದ್ದಾರೆ, ಇವರೆಲ್ಲರ ಭಾಗವಹಿಸುವಿಕೆಯು ಈ ಅಭಿಯಾನದ ಅಗಾಧತೆ, ವೈವಿಧ್ಯತೆ ಮತ್ತು ಗಾಢ ಭಾವನಾತ್ಮಕತೆಯನ್ನು ಅರ್ಥಪೂರ್ಣವಾಗಿ ಪ್ರತಿಬಿಂಬಿಸಲಿದೆ.
ಗ್ರಾಹಕರಿಗೆ ಮೌಲ್ಯ, ವಿಶ್ವಾಸ ಮತ್ತು ಶ್ರೇಷ್ಠತೆಯನ್ನು ತಂದುಕೊಡುವ ನಿಟ್ಟಿನಲ್ಲಿ ತನ್ನ ಸಂಪ್ರದಾಯವನ್ನು ಮುಂದುವರಿಸಿರುವ ಮಲಬಾರ್ ಈ ಭವ್ಯವಾದ ಶೋರೂಂನ ಪ್ರಾರಂಭವನ್ನು ಸ್ಮರಣೀಯವಾಗಿಸಲು ವಿನ್ಯಾಸಗೊಳಿಸಲಾದ ವಿಶೇಷ ಡೀಲ್‌ಗಳನ್ನು ಗ್ರಾಹಕರ ಮುಂದಿಡುತ್ತಿದೆ. ಬ್ರಾಂಡ್ ತನ್ನ ಗ್ರಾಹಕರಿಗೆ ಎಲ್ಲಾ ಚಿನ್ನ, ಅನ್‌ಕಟ್ ಮತ್ತು ರತ್ನಾಭರಣಗಳ ಮೇಲೆ ಮೇಕಿಂಗ್ ಶುಲ್ಕದಲ್ಲಿ ಶೇ.30 ರವರೆಗೆ ರಿಯಾಯಿತಿ ಹಾಗೂ ವಜ್ರದ ಮೌಲ್ಯದ ಮೇಲೆ ಶೇ.30 ರವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿ ಜನವರಿ 16, 2026 ರವರೆಗೆ ಮಾತ್ರ ಮಾನ್ಯವಾಗಿದೆ. ಕರಕುಶಲತೆಯನ್ನು ಮೌಲ್ಯದೊಂದಿಗೆ ಸಂಯೋಜನೆಗೊಳಿಸುವ ಮೂಲಕ ಆಭರಣಗಳಲ್ಲಿ ಹೂಡಿಕೆ ಮಾಡಲು ಗ್ರಾಹಕರಿಗೆ ಈ ಕೊಡುಗೆಗಳು ಅವಕಾಶವನ್ನು ಕಲ್ಪಿಸುತ್ತವೆ.