ADVERTISEMENT

ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಪತಂಜಲಿಯ ಕೊಡುಗೆ: ಯಶಸ್ಸಿಗಾಗಿ ಕ್ರೀಡಾಪಟುಗಳಿಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 10:06 IST
Last Updated 24 ಏಪ್ರಿಲ್ 2025, 10:06 IST
   

ಸಮಗ್ರ ಆರೋಗ್ಯಕ್ಕೆ ಹೆಸರುವಾಸಿಯಾದ ‘ಪತಂಜಲಿ’ ಭಾರತದಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್‌ ಕ್ಷೇತ್ರಕ್ಕೆ ಕೊಡುಗೆ ನೀಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಕ್ರೀಡಾಪಟುಗಳ ದೈಹಿಕ ಸದೃಢತೆ ಮತ್ತು ಅವರ ನಿರಂತರ ಉತ್ಸಾಹಕ್ಕಾಗಿ ಬೇಕಾದ ಪ್ರಮುಖವಾದ ಆಯುರ್ವೇದದ ಉತ್ಪನ್ನಗಳನ್ನು ತಯಾರಿಸಿ ಸುಲಭವಾಗಿ ದೊರೆಯುವಂತೆ ಮಾಡುತ್ತದೆ. ತನ್ಮೂಲಕ ಪತಂಜಲಿ ಕಂಪನಿಯು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಪತಂಜಲಿಯ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಹಾಗೂ ಕ್ರೀಡಾಪಟುಗಳು ಯಶಸ್ಸು ಸಾಧಿಸಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಇಲ್ಲಿ ವಿವರಿಸುತ್ತಿದ್ದೇವೆ.

ಭಾರತೀಯ ಕ್ರೀಡಾಪಟುಗಳ ಮತ್ತು ಕ್ರೀಡಾ ತಂಡಗಳ ಪ್ರಮುಖ ಬೆಂಬಲಿಗರಾಗಿ ಪತಂಜಲಿ ಹೊರಹೊಮ್ಮಿದೆ. ಅವರ ಯಶಸ್ಸಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಪ್ರೋತ್ಸಾಹದ ರೂಪದಲ್ಲಿ ಒದಗಿಸುತ್ತಿದೆ. ಕಂಪನಿಯು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಅಲ್ಲದೇ ವಿವಿಧ ವಿಭಾಗಗಳ ಅನೇಕ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಮೂಲಕ ಬೆಂಬಲವನ್ನು ನೀಡುತ್ತಿದೆ. ಪತಂಜಲಿಯ ಕ್ರೀಡಾಪಟುಗಳಿಗೆ ಕೇವಲ ಹಣಕಾಸಿನ ಬೆಂಬಲವನ್ನು ಮಾತ್ರವಲ್ಲದೆ ಕಾರ್ಯಕ್ಷಮತೆ ಮತ್ತು ಉತ್ಸಾಹವನ್ನು ಹೆಚ್ಚಿಸುವ ಅತ್ಯುತ್ತಮ ನೈಸರ್ಗಿಕ ಉತ್ಪನ್ನಗಳನ್ನು ಒದಗಿಸುತ್ತದೆ. ಕ್ರೀಡೆ ಮತ್ತು ಆರೋಗ್ಯ, ವೆಲ್‌ನೆಸ್ ಕ್ಷೇತ್ರದಲ್ಲಿ ಅದರ ಸಕ್ರಿಯ ಭಾಗವಹಿಸುವಿಕೆಯ ಪತಂಜಲಿಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ದಿದೆ.

ಯಶಸ್ಸಿಗಾಗಿ ದೇಶದ ಕ್ರೀಡಾಪಟುಗಳನ್ನು ಆಯುರ್ವೇದದ ಮೇಲೆ ಗಮನ ಹರಿಸುವಂತೆ ಮಾಡುವುದು ಪತಂಜಲಿಯು ಕ್ರೀಡೆಗಳಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳಲ್ಲಿ ಒಂದು. ಇತ್ತೀಚಿನ ವರ್ಷಗಳಲ್ಲಿ, ಕ್ರೀಡಾಪಟುಗಳಲ್ಲಿ ದೈಹಿಕ ಸದೃಢತೆಯನ್ನು ಹೆಚ್ಚಿಸುವ ಮತ್ತು ಚೇತರಿಕೆಯನ್ನು ವೇಗಗೊಳಿಸುವುದಕ್ಕಾಗಿ ಆಯುರ್ವೇದವು ಮನ್ನಣೆ ಗಳಿಸುತ್ತಿದೆ. ಪತಂಜಲಿಯ ಆಯುರ್ವೇದ ಉತ್ಪನ್ನಗಳಾದ ನೈಸರ್ಗಿಕ ಸಪ್ಲಿಮೆಂಟ್‌ಗಳು, ಗಿಡಮೂಲಿಕೆ ಆಧರಿತ ನೋವುನಿವಾರಕಗಳು ಮತ್ತು ಎಣ್ಣೆಗಳು, ಕ್ರೀಡಾಪಟುಗಳಿಗೆ ತಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹಾಗೂ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ. ನೈಸರ್ಗಿಕ ಚೇತರಿಕೆಗೆ ಒತ್ತು ನೀಡುವ ಮೂಲಕ, ಕ್ರೀಡಾಪಟುಗಳು ಅತ್ಯುತ್ತಮವಾಗಿ ಆಟ ಆಡಲು ಮತ್ತು ದೀರ್ಘಕಾಲ ಫಿಟ್ ಆಗಿರಲು ಪತಂಜಲಿ ಸಹಾಯ ಮಾಡುತ್ತದೆ. ಫಿಟ್‌ನೆಸ್‌ ಅನ್ನು ಕಾಪಾಡಿಕೊಳ್ಳುವುದಕ್ಕಾಗಿ ಪತಂಜಲಿ ಆಯುರ್ವೇದವು ಕ್ರಾಂತಿಯನ್ನುಂಟುಮಾಡುತ್ತಿದೆ.

ADVERTISEMENT

ಭಾರತದ ಎಲ್ಲರ ಮೆಚ್ಚಿನ ಕ್ರೀಡಾ ತಂಡಗಳಲ್ಲಿ ಒಂದಾದ ‘ಹಾಕಿ ಇಂಡಿಯಾ’ ತಂಡದೊಂದಿಗೆ ಪತಂಜಲಿ ಪಾಲುದಾರಿಕೆ ಇದೆ. ಈ ಮೂಲಕ ಪತಂಜಲಿ ಕಂಪನಿಯ ‘ಕ್ರೀಡಾ ಬದ್ಧತೆ’ಯು ಸ್ಪಷ್ಟವಾಗಿದೆ. ಪತಂಜಲಿ ಪ್ರಾಯೋಜಕತ್ವದ ಮೂಲಕ ತಂಡವನ್ನು ಬೆಂಬಲಿಸಿ ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಅಲ್ಲದೇ ಯುವ ಕ್ರೀಡಾಪಟುಗಳಿಗೆ ಕ್ರೀಡೆಗಳನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಿದೆ. ಈ ಪಾಲುದಾರಿಕೆಯು ‘ಹಾಕಿ ಇಂಡಿಯಾ’ ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ, ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಮತ್ತು ಭಾರತದ ಕ್ರೀಡಾ ಸಾಧನೆಗಳಲ್ಲಿ ಹೆಮ್ಮೆಯ ಭಾವನೆಯನ್ನು ಬೆಳೆಸುತ್ತದೆ. ಭಾರತೀಯ ಹಾಕಿಯಲ್ಲಿನ ಪತಂಜಲಿಯ ಒಳಗೊಳ್ಳುವಿಕೆ ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ಕ್ರೀಡೆಯಲ್ಲಿ ಗರಿಷ್ಠ ಕಾರ್ಯಕ್ಷಮತೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಕ್ರೀಡಾಪಟುಗಳಿಗೆ ಪತಂಜಲಿಯ ಸ್ಪೋರ್ಟ್ಸ್ ಸಪ್ಲಿಮೆಂಟ್‌ಗಳು ನಿಜವಾಗಿಯೂ ಅವರ ದಿಕ್ಕನ್ನೇ ಬದಲಾಯಿಸುವಂತಿವೆ. ಉತ್ತಮ ಗುಣಮಟ್ಟದ ಅದರ ನೈಸರ್ಗಿಕ ಸಪ್ಲಿಮೆಂಟ್‌ಗಳು ಕ್ರೀಡಾಪಟುಗಳ ಶಕ್ತಿ, ಕ್ಷಮತೆ ಮತ್ತು ಚೇತರಿಕೆಗೆ ಅನುಕೂಲ ಒದಗಿಸುತ್ತವೆ. ಈ ಉತ್ಪನ್ನಗಳು ಹವ್ಯಾಸಿ ಮತ್ತು ವೃತ್ತಿಪರ ಕ್ರೀಡಾಪಟುಗಳಿಬ್ಬರಿಗೂ ಅಗತ್ಯವಾಗಿವೆ. ಎಲ್ಲರೂ ಫಿಟ್ ಆಗಿರಲು ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವನ್ನು ಒದಗಿಸುತ್ತವೆ. ಸಮಗ್ರ ಆರೋಗ್ಯದ ಮೇಲೆ ಬಲವಾದ ಗಮನವನ್ನು ಹೊಂದಿರುವ ಪತಂಜಲಿಯ ಸ್ಪೋರ್ಟ್ಸ್ ಸಪ್ಲಿಮೆಂಟ್‌ಗಳು  ಕ್ರೀಡಾ ಉದ್ಯಮದಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತಿವೆ.

ಪತಂಜಲಿಯ ಕ್ರೀಡಾ ಸಮರ್ಪಣೆ ಕೇವಲ ವೈಯಕ್ತಿಕ ಅಥವಾ ಒಂದು ತಂಡಕ್ಕೆ ಸಂಬಂಧಿಸಿಲ್ಲ. ಅದು ಭಾರತದಲ್ಲಿ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಚಿಂತಿಸಿ ಕಾರ್ಯನಿರ್ವಹಿಸುತ್ತದೆ. ಫಿಟ್‌ನೆಸ್‌ ಅನ್ನು ಉತ್ತೇಜಿಸುವ, ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ರಾಷ್ಟ್ರೀಯ ತಂಡಗಳನ್ನು ಬೆಂಬಲಿಸುವ ಮೂಲಕ ಪತಂಜಲಿ ಭಾರತೀಯ ಕ್ರೀಡೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಕಂಪನಿಯು ಕ್ರೀಡಾಪಟುಗಳು, ಕ್ರೀಡೆ ಎಲ್ಲಾ ಹಂತಗಳಲ್ಲಿಯೂ ಅಭಿವೃದ್ಧಿ ಹೊಂದುವಂತಹ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಿದೆ. ಅದರ ಈ ಬದ್ಧತೆಯು ಭಾರತದಲ್ಲಿ ಶ್ರೇಷ್ಠ ಕ್ರೀಡಾ ಸಂಸ್ಕೃತಿ ಬೆಳೆಯಲು ಕಾರಣವಾಗಿದೆ. ಅಲ್ಲದೇ, ಮುಂದಿನ ತಲೆಮಾರಿನ ಕ್ರೀಡಾಪಟುಗಳು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುತ್ತದೆ.

ಕ್ರೀಡೆ ಮತ್ತು ಫಿಟ್ನೆಸ್ ಮೇಲೆ ಪತಂಜಲಿಯ ಪ್ರಭಾವ ವಿಸ್ತಾರವಾಗಿದ್ದು, ಅದು ಒಟ್ಟಾರೆ ಕ್ರೀಡಾಪಟುಗಳು, ತಂಡಗಳು ಮತ್ತು ಭಾರತದ ವಿಶಾಲ ಕ್ರೀಡಾ ಪರಿಸರ ವ್ಯವಸ್ಥೆಯ ಮೇಲೆ ವ್ಯಾಪಕ ಪ್ರಭಾವ ಬೀರುತ್ತದೆ. ಕ್ರೀಡಾಪಟುಗಳಿಗೆ ಬೆಂಬಲಕ್ಕಾಗಿ, ಫಿಟ್‌ನೆಸ್‌ಗಾಗಿ ಮತ್ತು ಚೇತರಿಕೆಗಾಗಿ ಆಯುರ್ವೇದಕ್ಕೆ ಒತ್ತು ನೀಡುವುದು ಮತ್ತು ಹಾಕಿ ಇಂಡಿಯಾ ಜೊತೆ ಪಾಲುದಾರಿಕೆ ಹಾಗೂ ಹೊಸ ಹೊಸ ಕ್ರೀಡಾ ಪೋಷಣೆಗಳ ಮೂಲಕ ಮೇರುಸ್ಥಾನದಲ್ಲಿದೆ. ಕಂಪನಿಯು ಕ್ರೀಡೆಗಳಿಗೆ ತನ್ನ ಬದ್ಧತೆಯನ್ನು ಹೆಚ್ಚಿಸುತ್ತಲೇ ಇರುವುದರಿಂದ ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾಕ್ಷೇತ್ರಕ್ಕೆ ಪತಂಜಲಿಯು ಒಂದು ಭರವಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.