ADVERTISEMENT

ಪತಂಜಲಿಯ ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯದ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 8:47 IST
Last Updated 14 ಏಪ್ರಿಲ್ 2025, 8:47 IST
   

ಪತಂಜಲಿ ಆಯುರ್ವೇದವು ಸ್ವಾಮಿ ರಾಮದೇವ್‌ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಹಾಗೂ ಯೋಗಕ್ಷೇಮ ಉತ್ಪನ್ನಗಳ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ ಬ್ರ್ಯಾಂಡ್‌ ಆಗಿಯಷ್ಟೇ ಬೆಳೆದಿಲ್ಲ. ಈ ಉದ್ಯಮವು, ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವ ಹಾಗೂ ಸಮಾಜದ ಅಗತ್ಯಗಳಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪರಿಹಾರ ಒದಗಿಸುವ ಗುರಿಯನ್ನೂ ಹಾಕಿಕೊಂಡಿದೆ.

ಪತಂಜಲಿಯು ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದು, ಸ್ಥಳೀಯ ಆರ್ಥಿಕತೆಗೆ ಪ್ರೇರಣೆಯಾಗಿದೆ. ಪೂರೈಕೆದಾರರು, ರೈತರು ಹಾಗೂ ಕಾರ್ಮಿಕರ ನಡುವಣ ವ್ಯಾಪಕ ಸರಪಳಿ ಮೂಲಕ ಗ್ರಾಮೀಣ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಿ, ಅವರು ಆರ್ಥಿಕವಾಗಿ ಸ್ವತಂತ್ರರಾಗಲು ನೆರವಾಗಿದೆ.

ಆರೋಗ್ಯ ರಕ್ಷಣೆಯಿಂದ ಹಿಡಿದು ನೈಸರ್ಗಿಕ ಸಂರಕ್ಷಣೆಗೆ ಸಂಬಂಧಿಸಿದ ಉಪಕ್ರಮಗಳವರೆಗಿನ ತುರ್ತು ಸಮಸ್ಯೆಗಳನ್ನು ಪತಂಜಲಿಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಚಟುವಟಿಕೆಗಳು ಪರಿಹರಿಸುತ್ತವೆ. ಸಂಸ್ಥೆಯು ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ, ರಾಸಾಯನಿಕ ಮುಕ್ತ, ಸ್ವಾಭಾವಿಕ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಹಾಗೆಯೇ, ಸಮುದಾಯದ ಒಟ್ಟಾರೆ ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.

ADVERTISEMENT

ಪತಂಜಲಿ ಸಂಸ್ಥೆಯು ಶಿಕ್ಷಣದ ಮೇಲೆ ಅದರಲ್ಲೂ ಬಡ ಮಕ್ಕಳ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಗಳು, ಗುಣಮಟ್ಟದ ಶಿಕ್ಷಣ, ಮೂಲಭೂತ ಜೀವನ ಕೌಶಲಗಳು ಹಾಗೂ ಮೌಲ್ಯಗಳನ್ನು ಕಲಿಸುತ್ತವೆ. ಇದರಿಂದಾಗಿ, ಮಕ್ಕಳು ಬಡತನವನ್ನು ಮೀರಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡಲು ಸಾಧ್ಯವಾಗುತ್ತದೆ.

ಸ್ವದೇಶಿ ಅಥವಾ ಸ್ವಾವಲಂಬನೆ - ಪತಂಜಲಿ ಸಂಸ್ಥೆಯ ದೃಷ್ಟಿಕೋನದ ಮೂಲವಾಗಿದೆ. ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸುವ ಸಂಸ್ಥೆಯು, ದೇಶೀಯ ಉತ್ಪನಗಳನ್ನು ಬೆಂಬಲಿಸುತ್ತದೆ. ಹಾಗೆಯೇ, ಸ್ಥಳೀಯ ಕಂಪನಿಗಳನ್ನು ಬೆಂಬಲಿಸುವಂತೆ ಭಾರತೀಯರನ್ನು ಒತ್ತಾಯಿಸುತ್ತದೆ. ಇಲ್ಲಿನ (ದೇಶದ) ರೈತರು ಬೆಳೆಯುವ ಸ್ಥಳೀಯ ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡುವ ಪತಂಜಲಿ, ಆಮದಿನ ಮೇಲಿನ ಹೊರೆಯನ್ನೂ ಕಡಿಮೆ ಮಾಡುತ್ತದೆ.

ಪತಂಜಲಿಯ ಸಾಮಾಜಿಕ ಕಾರ್ಯಕ್ರಮಗಳ ಬದ್ಧತೆಯು ವ್ಯವಹಾರವನ್ನೂ ಮೀರಿದ್ದಾಗಿದೆ. ಲಾಭವಷ್ಟೇ ಕಂಪನಿಯ ಯಶಸ್ಸಲ್ಲ. ಜನರ ಜೀವನವನ್ನು ಪರಿವರ್ತಿಸುವುದೇ ಆಗಿದೆ ಎಂಬುದನ್ನು ಸ್ವಾಮಿ ರಾಮದೇವ್‌ ಅವರು ಪುನರುಚ್ಚರಿಸುತ್ತಾರೆ. ಪತಂಜಲಿಯ ಸಾಮಾಜಿಕ ಚಟುವಟಿಕೆಗಳು ಅದರ ಮೌಲ್ಯಗಳಲ್ಲಿ ಬೇರೂರಿದೆ. ಆರೋಗ್ಯಕರ ಮತ್ತು ಸಮೃದ್ಧ ಭಾರತಕ್ಕಾಗಿನ ದೃಷ್ಟಿಕೋನವು ಕಂಪನಿಯ ಬ್ರ್ಯಾಂಡ್‌ಗಿಂತಲೂ ದೊಡ್ಡದಾಗಿದೆ.

ಪತಂಜಲಿ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಕೈಗೊಂಡಿರುವ ಕಾರ್ಯಗಳು ಭಾರತದ ಸಮುದಾಯಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತಿವೆ. ಸ್ವದೇಶಿಯನ್ನು ಪ್ರತಿಪಾದಿಸುವ ಹಾಗೂ ಗೃಹ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ, ಸಾಮಾಜಿಕ ಕಲ್ಯಾಣದ ವಿಚಾರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಆ ಮೂಲಕ, ಉದ್ಯಮವು ಜನರ ಜೀವನ ಸುಧಾರಣೆಯನ್ನು ಉತ್ತೇಜಿಸಲು ಹಾಗೂ ಸಮಾಜವನ್ನು ಮುನ್ನಡೆಸಲು ಶಕ್ತಿಯಾಗಬಹುದು ಎಂಬುದನ್ನು ಸಾಬೀತುಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.