ADVERTISEMENT

`ಆಧಾರ್' ಸೌಲಭ್ಯಕ್ಕೆ ಕೆನರಾ ಬ್ಯಾಂಕ್ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 21:51 IST
Last Updated 27 ನವೆಂಬರ್ 2012, 21:51 IST

ಬೆಂಗಳೂರು: `ಆಧಾರ್' ಕಾರ್ಡ್ ಮೂಲಕ ನೇರ ನಗದು ವರ್ಗಾವಣೆ ಸೌಲಭ್ಯವನ್ನು ಕೆನರಾ ಬ್ಯಾಂಕ್ ಆರಂಭಿಸಿದ್ದು, ಇತ್ತೀಚೆಗೆ ಪುಣೆ ವೃತ್ತ ವ್ಯಾಪ್ತಿಯ ಡೆಕ್ಕನ್ ಜಿಮಖಾನ ಶಾಖೆಯಲ್ಲಿ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಎಸ್. ಭಾರ್ಗವ ಚಾಲನೆ ನೀಡಿದರು.

ಸರ್ಕಾರದ ಯೋಜನೆಗಳ ಆರ್ಥಿಕ ನೆರವನ್ನು ಫಲಾನುಭವಿ ಖಾತೆಗೆ ವರ್ಗಾಯಿಸುವ ಈ ಸೌಲಭ್ಯ 51 ಜಿಲ್ಲೆಗಳಲ್ಲಿನ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿದೆ. ಕೇಂದ್ರದ ವಿತ್ತೀಯ ಸೇರ್ಪಡೆ ಕಾರ್ಯಕ್ರಮದ ಅಂಗವಾಗಿ 1621 ಗ್ರಾಮಗಳಲ್ಲಿ 522 ಅತಿಸಣ್ಣ ಶಾಖೆ ಆರಂಭಿಸಿದ್ದು, ಸ್ವಸಹಾಯ ಗುಂಪುಗಳ 30,000 ಸದಸ್ಯರನ್ನು ಬ್ಯಾಂಕಿಂಗ್ ಸೇವೆ ವ್ಯಾಪ್ತಿಗೆ ತರಲಾಗಿದೆ. 6063 `ಆಧಾರ್' ಖಾತೆಗಳನ್ನೂ ತೆರೆಯಲಾಗಿದೆ ಎಂದು ಅವರು  ಹೇಳಿದ್ದಾಗಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT