ನವದೆಹಲಿ (ಪಿಟಿಐ): ವಾರಕ್ಕೊಮ್ಮೆ ಪ್ರಕಟಿಸಲಾಗುತ್ತಿದ್ದ ಪ್ರಾಥಮಿಕ ಮತ್ತು ಆಹಾರ ಹಣದುಬ್ಬರ ಅಂಕಿ ಅಂಶಗಳನ್ನು ಇನ್ನು ಮುಂದೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಹಾರ ಧಾನ್ಯಗಳ ಬೆಲೆಗಳ ಊಹಾತ್ಮಕ ಚಲನವಲನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೂ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರದ ಹಣದುಬ್ಬರ ವಿವರದ ಪ್ರಕಟಣೆ ನಿಲ್ಲಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.