ADVERTISEMENT

ಕಾರು ಮಾರಾಟ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 20:30 IST
Last Updated 2 ನವೆಂಬರ್ 2012, 20:30 IST

ನವದೆಹಲಿ (ಪಿಟಿಐ):  ಹಬ್ಬದ ಖರೀದಿ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿಗಳು ಅಕ್ಟೋಬರ್ ತಿಂಗಳಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸಿವೆ. ಮುಂಚೂಣಿ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಅಕ್ಟೋಬರ್‌ನಲ್ಲಿ 96,002 ಕಾರುಗಳನ್ನು ಮಾರಾಟ ಮಾಡಿದ್ದು ಶೇ 86.56ರಷ್ಟು ಪ್ರಗತಿ ದಾಖಲಿಸಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಶೇ 30ರಷ್ಟು ಮಾರಾಟ ಪ್ರಗತಿ ಕಂಡಿದ್ದು, 51,316 ವಾಹನಗಳನ್ನು ಮಾರಾಟ ಮಾಡಿದೆ. ಹುಂಡೈ ಮೋಟಾರ್  ಮಾರಾಟ ಶೇ 8ರಷ್ಟು ಹೆಚ್ಚಿದ್ದು, ಒಟ್ಟು 35,778 ಕಾರುಗಳು ಮಾರಾಟವಾಗಿವೆ.

ಟೊಯೊಟಾ ಕಿಲೋಸ್ಕರ್ ಶೇ 14.11ರಷ್ಟು ಪ್ರಗತಿ ಕಂಡಿದೆ. `ಎಸ್‌ಯುವಿ~ ಮತ್ತು `ಎಂಯುವಿ~ ವಾಹನಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಂಪೆನಿ ಮಾರುಕಟ್ಟೆ ಮುಖ್ಯಸ್ಥ  ಸಂದೀಪ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಟಾಟಾ ಮೋಟಾರ್ಸ್, ಜನರಲ್ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ಕಂಪೆನಿಗಳ ಕಾರು ಮಾರಾಟದಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.