ADVERTISEMENT

ಗಂಭೀರ ಕಾಯಿಲೆಗಳ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ದೇಶದಲ್ಲಿ ಪ್ರತಿ ವರ್ಷವೂ 5 ಲಕ್ಷ ಮಂದಿ ಕ್ಯಾನ್ಸರ್‌ಗೆ ಒಳಗಾಗುತ್ತರೆ, 5 ಕೋಟಿ ಭಾರತೀಯರು ಹೃದಯ ರಕ್ತ ನಾಳ ರೋಗಗಳಿಗೆ ಈಡಾಗುತ್ತಾರೆ ಮತ್ತು ಪ್ರತಿ ವರ್ಷವು 1 ಲಕ್ಷ ಮಂದಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುವುದು ನಿಜಕ್ಕೂ ಕಳವಳ ಮೂಡಿಸುತ್ತದೆ.

ಜೀವನ ಶೈಲಿಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ, ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ, ಇಂತಹ ಕಾಯಿಲೆಗೆ ಒಳಗಾಗುವವರಸರಾಸರಿ  ವಯೋಮಾನವು ಪ್ರತಿ ವರ್ಷವೂ ಇಳಿಮುಖವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಸೌಲಭ್ಯವು ಯಾವುದೇ ಒಂದು ಕುಟುಂಬಕ್ಕೆ ಅನಿರೀಕ್ಷಿತವಾಗಿ ಎದುರಾಗುವ ವೈದ್ಯಕೀಯ ವೆಚ್ಚ ಭರ್ತಿ ಮಾಡಲು ಗಮನಾರ್ಹವಾಗಿ ನೆರವಾಗುತ್ತದೆ. ವೈದ್ಯಕೀಯ ಸೇವೆಗಳು ದುಬಾರಿಯಾಗುತ್ತಿರುವುದರಿಂದ ಮಧ್ಯಮವರ್ಗದವರಿಗೆ, ಉತ್ತಮ ಚಿಕಿತ್ಸೆ ಮತ್ತು ಆಸ್ಪತ್ರೆ ವೆಚ್ಚಗಳೂ ದುರ್ಭರವಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯ ವಿಮೆ ಸೌಲಭ್ಯಗಳು ನೆರವಿಗೆ ಬರುತ್ತವೆ.

ಕುಟುಂಬದ ಪ್ರೀತಿಪಾತ್ರ  ವ್ಯಕ್ತಿಗೆ ಗಂಭೀರ ಸ್ವರೂಪದ ಅನಾರೋಗ್ಯವಿದೆ ಎಂಬುದು ತಿಳಿದು ಬಂದಾಗ ಕುಟುಂಬದ ಸದಸ್ಯರಲ್ಲಿ ಆರ್ಥಿಕ ಸುಭಧ್ರತೆಯ ಬಗ್ಗೆ ಸಹಜವಾಗಿಯೇ  ಆತಂಕ ಮೂಡುತ್ತದೆ.  ಇಂತಹ ಸಂದರ್ಭಗಳಲ್ಲಿ  ಭಾರ್ತಿ  ಆಕ್ಸಾ ಸಾಮಾನ್ಯ ವಿಮೆ ಪರಿಚಯಿಸಿರುವ ಭಾರತಿ ಆಕ್ಸಾ ಸ್ಮಾರ್ಟ್ ಹೆಲ್ತ್ ಕ್ರಿಟಿಕಲ್ ಇಲ್‌ನೆಸ್ ( ಗಂಭೀರ ಅನಾರೋಗ್ಯ)  ವಿಮಾ ಪಾಲಿಸಿ ನೆರವಿಗೆ ಬರುತ್ತದೆ ಎಂದು    ಭಾರತಿ ಆಕ್ಸಾ ಸಾಮಾನ್ಯ ವಿಮೆ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಡಾ. ಅಮರನಾಥ್ ಅನಂತ ನಾರಾಯಣನ್ ಅವರು ಅಭಿಪ್ರಾಯಪಡುತ್ತಾರೆ.

ಭಾರ್ತಿ  ಸ್ಮಾರ್ಟ್ ಹೆಲ್ತ್ ಆಕ್ಸಾ ಕ್ರಿಟಿಕಲ್ ಇನ್ಸೂರೆನ್ಸ್ ಪಾಲಿಸಿಯು   ಗಂಭೀರ ಕಾಯಿಲೆಗಳಿಗಾಗಿಯೇ ರೂಪಿಸಿದ ವಿಶಿಷ್ಟ ಪಾಲಿಸಿಯಾಗಿದೆ.

ಆಸ್ತಿ, ವರಮಾನ ಮತ್ತು ಜೀವನೋಪಾಯ  ರಕ್ಷಿಸಲು ಭಾರ್ತಿ  ಆಕ್ಸಾ ನೆರವಿಗೆ ಬರಲಿದೆ. ಇದು ವಿವಿಧ ವಯೋಮಾನದರ ಅಗತ್ಯಗಳಿಗೆ ತಕ್ಕಂತೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿಕೊಡುತ್ತದೆ.

ಸಣ್ಣ ಮೊತ್ತದ ಹೂಡಿಕೆ ಮೂಲಕ ಉಳಿತಾಯ, ವರಮಾನ ಮತ್ತು ಚಿಕಿತ್ಸಾ ವೆಚ್ಚಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು  ಉಳಿಸುವ ಯೋಜನೆ ಇದಾಗಿದೆ.

 ಇದು 20 ಗಂಭೀರ ಬಗೆಯ ಕಾಯಿಲೆಗಳಿಗೆ ವಿಮಾ ಸೌಲಭ  ಒದಗಿಸುತ್ತದೆ. ದೇಶದಲ್ಲಿನ ವಿಮೆ ಪಾಲಿಸಿಯೊಂದು ಒದಗಿಸುವ ಗರಿಷ್ಠ ಸೌಲಭ್ಯ ಇದಾಗಿದೆ.

ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು,   ನರ ಮಂಡಲ ಮತ್ತು ಕರುಳುಗಳಿಗೆ ವಿಮೆ ಸೌಲಭ್ಯ ಒದಗಿಸುವ ಏಕೈಕ ವಿಮಾ ಪಾಲಿಸಿ ಇದಾಗಿದೆ.

ಆಸ್ಪತ್ರೆ ನಗದು ಭತ್ಯೆ, ಮನೆಯಲ್ಲಿಯೇ  ದಾದಿಯರ ಸೇವೆ, ಆಂಬುಲೆನ್ಸ್ ವೆಚ್ಚ, ಒಳರೋಗಿ  ಚಿಕಿತ್ಸೆ ಶುಲ್ಕಗಳು, ಚೇತರಿಕೆ ಅನುದಾನ ಮತ್ತಿತರ ವೆಚ್ಚಗಳನ್ನೂ ಭರಿಸಲಿದೆ ಎಂದು ಅಮರನಾಥ್ ಅನಂತ ನಾರಾಯಣನ್ ಹೇಳುತ್ತಾರೆ. ಮಾಹಿತಿಗೆ ಶುಲ್ಕ ರಹಿತ ಸಂಖ್ಯೆ 1800 1032292 ಗೆ ಕರೆ ಮಾಡಬಹುದು.              l

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.