ADVERTISEMENT

ಜನವರಿಯಲ್ಲೂ ಕೊಬ್ಬರಿ ತೆಂಗಿಗೆ ಉತ್ತಮ ಧಾರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಕೊಯಮತ್ತೂರು(ಪಿಟಿಐ): ಹಬ್ಬ, ಜಾತ್ರೆ ಗಳ ಸಂದರ್ಭವಾಗಿರುವುದರಿಂದ 2014  ಜನವರಿ ಅಂತ್ಯದವರೆಗೂ ತೆಂಗಿನ ಕಾಯಿ ತಲಾ 1ಕ್ಕೆ ₨15ರಿಂದ 16 ಮತ್ತು ಕೊಬ್ಬರಿ ಧಾರಣೆ ಕೆ.ಜಿ.ಗೆ ₨75ರಿಂದ 82ರಷ್ಟು ಇರಲಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾ ಲಯ ತಿಳಿಸಿದೆ.

ತೆಂಗಿನಕಾಯಿಗೆ ಪೊಲ್ಲಾಚ್ಚಿ ಮಾರುಕ ಟ್ಟೆಯಲ್ಲಿ, ಕೊಬ್ಬರಿಗೆ ಕೊಯಮತ್ತೂರು, ಈರೋಡ್‌ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಈ ಬೆಲೆ ಲಭಿಸುತ್ತಿದೆ. ಕರ್ನಾಟಕ, ಆಂಧ್ರ ಪ್ರದೇಶದಿಂದ ಕೊಬ್ಬರಿ ಆವಕ ತಗ್ಗಿರುವು ದರಿಂದ ಕೇರಳ, ತಮಿಳುನಾಡು ಮಾರು ಕಟ್ಟೆಯಲ್ಲಿ ಸರಕಿಗೆ ಕೊರತೆ ಉಂಟಾಗಿದೆ. ಇದೂ ಕೂಡ ಧಾರಣೆ ಮೇಲ್ಮಟ್ಟದಲ್ಲೇ ಇರಲು ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.