ADVERTISEMENT

ಬಿಇಎಂಎಲ್‌ಗೆ ರೂ..230 ಕೋಟಿ ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್ -ಸೆಪ್ಟೆಂಬರ್ ಅವಧಿಯಲ್ಲಿ ಗಣಿಗಾರಿಕೆ ಉಪಕರಣಗಳ ಪೂರೈಕೆಗಾಗಿ ಒಟ್ಟು ್ಙ230 ಕೋಟಿ ಮೊತ್ತದ ಗುತ್ತಿಗೆ ಪಡೆದುಕೊಂಡಿದೆ.

ಗಣಿಗಾರಿಕೆಯೂ ಸೇರಿದಂತೆ ರೈಲ್ವೆ, ಮೆಟ್ರೊ, ವಿಮಾನಯಾನ, ಇ-ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಉಪಕರಣಗಳ ಪೂರೈಕೆಗಾಗಿ  ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಗಳಾದ ಸೆಂಟ್ರಲ್ ಮತ್ತು ನಾರ್ದನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ಗಳಿಂದಲೂ ಬೇಡಿಕೆ ಪಡೆದುಕೊಂಡಿದೆ. ಈ ಸಂಸ್ಥೆಗಳಿಗೆ 100 ಮತ್ತು 60 ಟನ್ ಡಂಪ್ ಟ್ರಕ್‌ಗಳನ್ನು `ಬಿಇಎಂಎಲ್~ ಪೂರೈಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.