
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಬುಧವಾರ ಸಂಜೆ ನಡೆದ 90 ನಿಮಿಷಗಳ ದೀಪಾವಳಿ ವಿಶೇಷ ಮುಹೂರ್ತ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 34 ಅಂಶಗಳ ಏರಿಕೆ ದಾಖಲಿಸಿದೆ.
ಸೂಚ್ಯಂಕ ಏರಿಕೆಯ ಮೂಲಕ ಸಂವತ್ಸ ವರ್ಷ 2068 ವಹಿವಾಟಿಗೆ ಶುಭ ಮುನ್ನುಡಿ ಬರೆಯಿತು.17,288ಅಂಶಗಳಿಗೆ ದೀಪಾವಳಿ ವಹಿವಾಟು ಕೊನೆಗೊಂಡಿತು. ವಿಶೇಷ ವಹಿವಾಟಿನಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಬ್ಲೂಚಿಪ್ ಕಂಪೆನಿಗಳು ಹೆಚ್ಚಿನ ಲಾಭ ಮಾಡಿಕೊಂಡವು.
ಜಾಗತಿಕ ಷೇರು ಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕಳೆದ ಎರಡು ವಹಿವಾಟು ದಿನಗಳಲ್ಲಿ ಸೂಚ್ಯಂಕ ಒಟ್ಟು 470 ಅಂಶಗಳಷ್ಟು ಚೇತರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.