ADVERTISEMENT

ಯುಪಿಐ ವಹಿವಾಟಿಗೂ ಶುಲ್ಕ?

ಪಿಟಿಐ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಯುಪಿಐ ವಹಿವಾಟಿಗೂ ಶುಲ್ಕ?
ಯುಪಿಐ ವಹಿವಾಟಿಗೂ ಶುಲ್ಕ?   

ಮುಂಬೈ: ಮೊಬೈಲ್‌ ಆ್ಯಪ್‌ ಆಧಾರಿತ ನಗದು ರಹಿತ ವರ್ಗಾವಣೆ ವ್ಯವಸ್ಥೆಯಾದ ‘ಯುಪಿಐ’ ಉಚಿತ ಸೇವೆಗೆ ಇನ್ನು ಮುಂದೆ ಗ್ರಾಹಕರು ಶುಲ್ಕ ತೆರಬೇಕಾಗುತ್ತದೆ.

ನಗದು ರಹಿತ  ವಹಿವಾಟು ಉತ್ತೇಜಿಸಲು ಉಚಿತವಾಗಿ ಒದಗಿಸುತ್ತಿದ್ದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಸೇವೆಗೆ ಶುಲ್ಕ ವಿಧಿಸಲು ಇದೇ ಮೊದಲ ಬಾರಿಗೆ  ಬ್ಯಾಂಕ್‌ಗಳು ಮುಂದಾಗಿವೆ.

ಯುಪಿಐ ಮೂಲಕ ಬಳಕೆದಾರರ ಮಧ್ಯೆ ನಡೆಯುವ ವಹಿವಾಟಿಗೆ(ಪಿ2ಪಿ) ಶುಲ್ಕ ವಿಧಿಸುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಹೇಳಿವೆ.

‘ಇಲ್ಲಿಯವರೆಗೆ ಯುಪಿಐ ವಹಿವಾಟಿಗೆ ಯಾವುದ ಬ್ಯಾಂಕ್‌ ಶುಲ್ಕ ವಿಧಿಸುತ್ತಿರಲಿಲ್ಲ. ಶುಲ್ಕ ವಿಧಿಸುವುದು ಇಲ್ಲವೇ ವಿಧಿಸದೆ ಇರುವುದು ಬ್ಯಾಂಕ್‌ಗಳ ವಿವೇಚನೆಗೆ ಬಿಟ್ಟಿದ್ದು’ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಮುಖ್ಯಸ್ಥ ದಿಲಿಪ್‌ ಅಸ್ಬೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಾಮಾನ್ಯವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮೊಬೈಲ್‌ ಆ್ಯಪ್‌ ಆಧಾರಿತ ನಗದು ರಹಿತ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. 

‘ಯುಪಿಐ ಮೂಲಕ ಗ್ರಾಹಕ ಪಾವತಿಸುವ ಹಣಕ್ಕೆ ವರ್ತಕರು  ಶುಲ್ಕ ಭರಿಸಬೇಕಾಗುತ್ತದೆ. ಗ್ರಾಹಕರಿಬ್ಬರ ನಡುವಣ ವಹಿವಾಟಿನಲ್ಲಿ ಹಣ ಕಳಿಸುವ ವ್ಯಕ್ತಿ ಶುಲ್ಕ ಭರಿಸಬೇಕಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಭೀಮ್‌ ಆ್ಯಪ್‌’ ಮೂಲಕ ಇಬ್ಬರು ಬಳಕೆದಾರರ ಮಧ್ಯೆ ನಡೆಯುವ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಎರಡು ತಿಂಗಳಲ್ಲಿ ತೀರ್ಮಾನ
ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಕೆಲವು ಬ್ಯಾಂಕ್‌ಗಳ ನಿರ್ಧಾರ ಕುರಿತು ಚರ್ಚಿಸಲು ಶೀಘ್ರದಲ್ಲಿಯೇ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆಯಲಾಗುವುದು. ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.

ಸದ್ಯ ಪ್ರತಿ ತಿಂಗಳು ಯುಪಿಐ ಮೂಲಕ ನಡೆಯುವ ಸರಾಸರಿ ವಹಿವಾಟು ಪ್ರಮಾಣ ಒಂದು ಕೋಟಿಯಷ್ಟಿದೆ. ಈ ಪ್ರಮಾಣ 2–3 ಕೋಟಿ ತಲುಪಿದರೆ ಶುಲ್ಕ ವಿಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.