ADVERTISEMENT

ವಿಶೇಷ ವಹಿವಾಟು: ಸೂಚ್ಯಂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಮುಂಬೈ (ಪಿಟಿಐ): ಶನಿವಾರ ಒಂದೂವರೆ ಗಂಟೆಗಳ ಕಾಲ ನಡೆದ  ವಿಶೇಷ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 19 ಅಂಶಗಳಷ್ಟು ಇಳಿಕೆ ದಾಖಲಿಸಿತು.

ವಾಯಿದಾ ವಹಿವಾಟನ್ನು ಮೇಲ್ದರ್ಜೆಗೇರಿಸಲು ಈ ವಿಶೇಷ ವಹಿವಾಟು ನಡೆಯಿತು.ಚಟುವಟಿಕೆ ಸೀಮಿತವಾಗಿತ್ತು. ಡಿಎಲ್‌ಎಫ್, ಮಾರುತಿ, ಬಿಎಚ್‌ಇಎಲ್‌ಕೋಲ್ ಇಂಡಿಯಾ, ಒಎನ್‌ಜಿಸಿ ಕಂಪೆನಿಗಳು ಲಾಭ ಮಾಡಿಕೊಂಡವು. 

 ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ  7 ಅಂಶಗಳಷ್ಟು ಕುಸಿತ ಕಂಡು 4,746 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ದಿನದಂತ್ಯಕ್ಕೆ ರೂ1,094 ಕೋಟಿ ಮೊತ್ತದ ವಹಿವಾಟು ದಾಖಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.