ಬೆಂಗಳೂರು: ಉದ್ಯಮ ಸಂಸ್ಥೆಗಳಿಗೆ ಸುಧಾರಿತ ತಂತ್ರಜ್ಞಾನ ಅಳವಡಿಕೆ, ಕೌಶಲ ಅಭಿವೃದ್ಧಿ ಮತ್ತು ಆಡಳಿತ ನಿರ್ವಹಣೆಯಲ್ಲಿ ನೆರವು ನೀಡಲು ‘ಇಂಟೆಲ್ಲಿಲೀಪ್’ ಎಂಬ ಸ್ಟಾರ್ಟ್ಅಪ್ ಸಂಸ್ಥೆಯೊಂದು ಆರಂಭವಾಗಿದೆ. ವಸತಿ ಸಚಿವ ಅಂಬರೀಶ್ ಬುಧವಾರ ಇಲ್ಲಿ ಕಂಪೆನಿಯ ಲಾಂಛನ ಮತ್ತು ಸೇವೆಗಳನ್ನು ಅನಾವರಣಗೊಳಿಸಿದರು.
‘ಇಂಟೆಲ್ಲಿಲೀಪ್’ ವ್ಯವಹಾರ ಪ್ರಕ್ರಿಯೆ ನಿರ್ವಹಣೆ(ಬಿಪಿಎಂ) ಸೇವೆಗಳನ್ನು ಒದಗಿಸುವ ಕಂಪೆನಿಯಾಗಿದ್ದು, ಶಿಕ್ಷಣ, ಬ್ಯಾಂಕಿಂಗ್, ಹೊರಗುತ್ತಿಗೆ, ವಿಮಾನ ಯಾನ ಕ್ಷೇತ್ರಗಳಲ್ಲಿ ಸೇವೆ ಒದಗಿಸಲಿ ದ್ದೇವೆ. ‘ಬಿಪಿಎಂ’ ಪರಿಹಾರದಿಂದ ಉದ್ಯಮ ಸಂಸ್ಥೆಗಳ ಕಾರ್ಯನಿರ್ವಹಣೆ ಸಾಮರ್ಥ್ಯ ಹೆಚ್ಚಲಿದ್ದು, ವೆಚ್ಚ ಗಣನೀಯ ವಾಗಿ ತಗ್ಗಲಿದೆ. ಸೇವಾ ಗುಣಮಟ್ಟವೂ ಹೆಚ್ಚಲಿದೆ’ ಎಂದು ಕಂಪೆನಿಯ ವ್ಯವಸ್ಥಾ ಪಕ ನಿರ್ದೇಶಕ ವಿಘ್ನೇಶ್ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.