ADVERTISEMENT

ಸಕ್ಕರೆಗೆ ಶೇ 10 ಆಮದು ಸುಂಕ ವಿಧಿಸಲು ಶಿಫಾರಸು

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ನವದೆಹಲಿ (ಪಿಟಿಐ): ದೇಶದ ಸಕ್ಕರೆ ಕಾರ್ಖಾನೆಗಳು ಮತ್ತು ವರ್ತಕರಿಗೆ ಸ್ವಲ್ಪ `ಸಿಹಿ~ ಸುದ್ದಿ. ಕೇಂದ್ರ ಸರ್ಕಾರ ಸಕ್ಕರೆ ಆಮದು ಮೇಲೆ ಶೇ 10ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ.

`ದೇಶದಲ್ಲಿಯೇ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ದಾಸ್ತಾನು ಇದೆ. ಹಾಗಾಗಿ ಆಮದು ಮಾಡಿಕೊಳ್ಳುವ ಸಕ್ಕರೆ ಮೇಲೆ ಶೇ 10ರಷ್ಟು ಸುಂಕ ವಿಧಿಸಬೇಕು~ ಎಂದು ಕೇಂದ್ರ ಆಹಾರ ಸಚಿವಾಲಯ ಶಿಫಾರಸು ಮಾಡಿದೆ.

ಮೊದಲು ಸಕ್ಕರೆಗೆ ಶೇ 60ರಷ್ಟು ಆಮದು ಸುಂಕ ವಿಧಿಸಲಾಗುತ್ತಿದ್ದಿತು. 2009ರಲ್ಲಿ ಸಕ್ಕರೆ ಕೊರತೆ ಇದ್ದ ಪರಿಣಾಮ ಆಮದು ಸುಂಕ ರದ್ದು ಮಾಡಲಾಯಿತು. ಈ ಶೂನ್ಯ ಸುಂಕದ ಅವಧಿ ಜೂನ್ 30ಕ್ಕೆ ಕೊನೆಗೊಂಡಿದೆ.

ADVERTISEMENT

ದೇಶದಲ್ಲಿಯೇ ಸಕ್ಕರೆ ದಾಸ್ತಾನು ವಿಪರೀತ ಇರುವುದರಿಂದ ಆಮದು ಕಡಿಮೆ ಮಾಡಬೇಕಿದೆ. ಹಾಗಾಗಿ ಮತ್ತೆ ಆಮದು ಸುಂಕ ವಿಧಿಸಬೇಕು ಎಂಬುದು ಆಹಾರ ಸಚಿವಾಲಯದ ಮನವಿಯ ಸಾರಾಂಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.