ADVERTISEMENT

16,000 ಮಟ್ಟಕ್ಕಿಂತಲೂ ಕೆಳಕ್ಕೆ ಕುಸಿದ ಸೆನ್ಸೆಕ್ಸ್ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 10:10 IST
Last Updated 4 ಅಕ್ಟೋಬರ್ 2011, 10:10 IST

ಮುಂಬೈ (ಪಿಟಿಐ): ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರ ಮಧ್ಯಾಹ್ನದ ವೇಳೆಗೆ 406 ಪಾಯಿಂಟ್ ನಷ್ಟು ಕುಸಿದು, 16,000ದ ಮಟ್ಟಕ್ಕಿಂತಲೂ ಕೆಳಕ್ಕೆ ಇಳಿಯಿತು.
 
ಯೂರೋ- ವಲಯದ ಸಾಲ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಬಹುದೆಂಬ ಭೀತಿಯ ಪರಿಣಾಮವಾಗಿ ಈ ಕುಸಿತ ಉಂಟಾಯಿತು.

ಕಳೆದೆರಡು ದಿನಗಳಿಂದ ಇಳಿಕೆಯ ದಾರಿಯಲ್ಲಿದ್ದ ಸೂಚ್ಯಂಕ ಈದಿನ ಮತ್ತಷ್ಟು ಕುಸಿತದ ಹಾದಿಯಲ್ಲಿ ಸಾಗಿ 406.2 ಪಾಯಿಂಟ್ ಗಳಷ್ಟು (ಶೇಕಡಾ 2.51) ಕುಸಿದು ಮಧ್ಯಾಹ್ನ 1.30ರ ವೇಳೆಗೆ 15,745.43ಕ್ಕೆ ಇಳಿಸಿತು.

ಬ್ಯಾಂಕಿಂಗ್ ಮತ್ತು ಇತರ ಬಡ್ಡಿ ಸಂಬಂಧಿತ ಷೇರುಗಳೂ ಗಣನೀಯ ಪ್ರಮಾಣದಲ್ಲಿ ಕುಸಿದವು.
.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.