ADVERTISEMENT

ಹೊಸ ಎತ್ತರಕ್ಕೇರಿದ ಸೂಚ್ಯಂಕ

ಪಿಟಿಐ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಹೊಸ ಎತ್ತರಕ್ಕೇರಿದ ಸೂಚ್ಯಂಕ
ಹೊಸ ಎತ್ತರಕ್ಕೇರಿದ ಸೂಚ್ಯಂಕ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಐತಿಹಾಸಿಕ ಮಟ್ಟವನ್ನು ತಲುಪಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸತತ 5ನೇ ವಹಿವಾಟು ಅವಧಿಯಲ್ಲಿಯೂ ಏರಿಕೆ ದಾಖಲಿಸಿತು.

ಲೋಹ, ಸರ್ಕಾರಿ ಸ್ವಾಮ್ಯದ ಕಂಪನಿಗಳು, ತೈಲ ಮತ್ತು ಅನಿಲ ಹಾಗೂ ಹಣಕಾಸು ಸಂಸ್ಥೆಗಳ ಉತ್ತಮ ಗಳಿಕೆಯಿಂದ ಮಧ್ಯಂತರ ವಹಿವಾಟಿನಲ್ಲಿ 36,171 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು. ಅಂತಿಮವಾಗಿ 341 ಅಂಶ ಜಿಗಿತ ಕಂಡು 36,139 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ಕೇವಲ 5 ವಹಿವಾಟು ದಿನಗಳಲ್ಲಿ  ಸೂಚ್ಯಂಕವು 35 ಸಾವಿರದ ಗಡಿಯಿಂದ 36,000 ಗಡಿ ದಾಟಿದೆ. ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹1 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 117 ಅಂಶ ಹೆಚ್ಚಾಗಿ 11,084 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ. ಕೇವಲ 6 ದಿನಗಳ ವಹಿವಾಟು ಅವಧಿಯಲ್ಲಿ 11,000 ಗಡಿ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.