ADVERTISEMENT

ಚಿದಂಬರಂ ನಿವಾಸದಲ್ಲಿ ಸಿಬಿಐ ವರದಿ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 20:28 IST
Last Updated 8 ಫೆಬ್ರುವರಿ 2018, 20:28 IST
ಚಿದಂಬರಂ ನಿವಾಸದಲ್ಲಿ ಸಿಬಿಐ ವರದಿ: ತನಿಖೆಗೆ ಆದೇಶ
ಚಿದಂಬರಂ ನಿವಾಸದಲ್ಲಿ ಸಿಬಿಐ ವರದಿ: ತನಿಖೆಗೆ ಆದೇಶ   

ನವದೆಹಲಿ: ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದ ವರದಿ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಅವರ ನಿವಾಸದಲ್ಲಿ ಪತ್ತೆಯಾಗಿರುವ ಬಗ್ಗೆ ಸಿಬಿಐ ಆಂತರಿಕ ತನಿಖೆ ಆರಂಭಿಸಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜನವರಿ 13ರಂದು ದಕ್ಷಿಣ ದೆಹಲಿಯ ಜೋರ್‌ಬಾಗ್‌ನಲ್ಲಿನ ಚಿದಂಬರಂ ಅವರ ನಿವಾಸದ ಮೇಲೆ ದಾಳಿ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ  ಸಿಬಿಐ ಸಿದ್ಧಪಡಿಸಿದ್ದ ವರದಿಯನ್ನು ವಶಪಡಿಸಿಕೊಂಡಿತ್ತು. ಈ ಕುರಿತು ಜಾರಿ ನಿರ್ದೇಶನಾಲಯ ಅಧಿಕೃತ ಟಿಪ್ಪಣಿಯನ್ನು ಸಿಬಿಐಗೆ ಕಳುಹಿಸಿತ್ತು.

ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣದ ತನಿಖೆ ಕುರಿತು 2013ರಲ್ಲಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನೇ ಚಿದಂಬರಂ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಶಪಡಿಸಿಕೊಂಡಿರುವ ವರದಿಯ ಕೆಲವು ಭಾಗಗಳು ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಗೆ ಹೋಲುತ್ತವೆ ಎನ್ನಲಾಗಿದೆ.

‘ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಚಿದಂಬರಂ ಹೇಳಿದ್ದಾರೆ.

ರಾಜ್ಯಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಚಿದಂಬರಂ ಅವರು ಸಿಬಿಐ ವರದಿ ಬಗ್ಗೆ ವಿವರ ನೀಡಬೇಕು ಎಂದು ಬಿಜೆಪಿ ಸದಸ್ಯ ಭೂಪೇಂದ್ರ ಯಾದವ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.