ADVERTISEMENT

Budget 2025 | ‘ಉಡಾನ್’: ಹಿಗ್ಗಿದ ಕನಸು, ತಗ್ಗಿದ ಬಜೆಟ್

ಪಿಟಿಐ
Published 1 ಫೆಬ್ರುವರಿ 2025, 13:53 IST
Last Updated 1 ಫೆಬ್ರುವರಿ 2025, 13:53 IST
<div class="paragraphs"><p>ಇಂಡಿಗೊ&nbsp;ವಿಮಾನ (ಸಂಗ್ರಹ ಚಿತ್ರ)</p></div>

ಇಂಡಿಗೊ ವಿಮಾನ (ಸಂಗ್ರಹ ಚಿತ್ರ)

   

ಜನಸಾಮಾನ್ಯರೂ ವಿಮಾನಯಾನ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದ ‘ಉಡಾನ್’ (ಉಡೆ ದೇಶ್‌ ಕಾ ಆಮ್‌ ನಾಗರಿಕ್–ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ) ಯೋಜನೆಯನ್ನು ಬಜೆಟ್‌ನಲ್ಲಿ ಪರಿಷ್ಕರಿಸಲಾಗಿದ್ದು, 120 ಹೊಸ ಪ್ರದೇಶಗಳಿಗೆ ಮುಂದಿನ 10 ವರ್ಷಗಳಲ್ಲಿ ವಾಯುಯಾನ ಸಾಧ್ಯವಾಗಲಿದೆ.

ಆದಾಗ್ಯೂ ಉಡಾನ್ ಯೋಜನೆಗೆ ಮೀಸಲಿಟ್ಟಿರುವ ಹಣವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 32ರಷ್ಟು ಕಡಿಮೆಯಾಗಿದೆ. ₹540 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹800 ಕೋಟಿ ಮೀಸಲಿಡಲಾಗಿತ್ತು. 

ADVERTISEMENT

ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ನಾಗರಿಕರು ವಿಮಾನ ಸಂಚಾರ ಮಾಡಲು ಈ ಯೋಜನೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. 

ಬಿಹಾರದಲ್ಲಿ ಸುಸ್ಥಿರವಾದ ‘ಹಸಿರು ವಿಮಾನನಿಲ್ದಾಣಗಳು’ ತಲೆಎತ್ತಲಿವೆ ಎಂದೂ ಹಣಕಾಸು ಸಚಿವರು ಪ್ರಕಟಿಸಿದರು. 

‘ಉಡಾನ್’ ಯೋಜನೆಯು ಇದುವರೆಗೆ 88 ಪ್ರದೇಶಗಳಿಗೆ ವಾಯುಯಾನ ಸಂಪರ್ಕ ಕಲ್ಪಿಸಿದ್ದು, 169 ವಿಮಾನಗಳು ಅವುಗಳ ನಡುವೆ ಸಂಚರಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಪರ್ವತ ಪ್ರದೇಶಗಳು, ಈಶಾನ್ಯ ರಾಜ್ಯಗಳ ಸ್ಥಳಗಳಲ್ಲಿಯೂ ವಿಮಾನನಿಲ್ದಾಣಗಳು, ಹೆಲಿಪ್ಯಾಡ್‌ಗಳನ್ನು ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದರು. 

ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ₹2,400 ಕೋಟಿ ಬಜೆಟ್‌ ಮೀಸಲಿಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.