ADVERTISEMENT

Budget 2025: ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2025, 9:13 IST
Last Updated 1 ಫೆಬ್ರುವರಿ 2025, 9:13 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಶನಿವಾರ) ಸತತ ಎಂಟನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದಾರೆ. ಇದೇ ವೇಳೆ ‘ಮಧುಬನಿ’ ಕಲೆ ಇರುವ ಸೀರೆಯನ್ನು ಧರಿಸಿದ್ದ ಅವರು ಸಂಸತ್‌ ಭವನದಲ್ಲಿ ಗಮನ ಸೆಳೆದಿದ್ದಾರೆ.

ADVERTISEMENT

ರಕ್ಷಣಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಗೃಹ ವ್ಯವಹಾರಗಳು, ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಹಲವು ಇಲಾಖೆಗಳಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ?

ರಕ್ಷಣಾ ಇಲಾಖೆ: ₹4.91 ಲಕ್ಷ ಕೋಟಿ

ಗ್ರಾಮೀಣ ಅಭಿವೃದ್ಧಿ: ₹2.66 ಲಕ್ಷ ಕೋಟಿ

ಗೃಹ ಇಲಾಖೆ: ₹2.33 ಲಕ್ಷ ಕೋಟಿ

ಕೃಷಿ & ರೈತರ ಕಲ್ಯಾಣ: ₹1.71 ಲಕ್ಷ ಕೋಟಿ

ಶಿಕ್ಷಣ: ₹1.28 ಲಕ್ಷ ಕೋಟಿ

ಆರೋಗ್ಯ: ₹98,311 ಕೋಟಿ

ನಗರಾಭಿವೃದ್ಧಿ: ₹96,777 ಕೋಟಿ

ಮಾಹಿತಿ ತಂತ್ರಜ್ಞಾನ: ₹95,298 ಕೋಟಿ

ಇಂಧನ: ₹81,174 ಕೋಟಿ

ವಾಣಿಜ್ಯ ಮತ್ತು ಕೈಗಾರಿಕೆ: ₹68,553 ಕೋಟಿ

ಸಮಾಜ ಕಲ್ಯಾಣ ಇಲಾಖೆ: ₹60,052 ಕೋಟಿ

ವಿಜ್ಞಾನ ಕ್ಷೇತ್ರ: ₹55,679 ಕೋಟಿ

ಕಳೆದ ಬಾರಿ ರಕ್ಷಣಾ ಇಲಾಖೆಗೆ ₹5.94 ಲಕ್ಷ ಕೋಟಿ, ಗೃಹ ಇಲಾಖೆ ₹1.96 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿ ₹1.60 ಲಕ್ಷ ಕೋಟಿ, ರಸ್ತೆ ಹಾಗೂ ಹೆದ್ದಾರಿ 2.70 ಲಕ್ಷ ಕೋಟಿ, ರೈಲ್ವೆ ₹2.41 ಲಕ್ಷ ಕೋಟಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ₹2.06 ಲಕ್ಷ ಕೋಟಿ, ರಾಸಾಯನಿಕ ಹಾಗೂ ರಸಗೊಬ್ಬರ ₹1.78 ಲಕ್ಷ ಕೋಟಿ, ಕೃಷಿ & ರೈತರ ಕಲ್ಯಾಣ ₹1.25 ಲಕ್ಷ ಕೋಟಿ, ದೂರ ಸಂಪರ್ಕ ₹1.2 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.