ADVERTISEMENT

ವಿಕಸಿತ್ ಭಾರತ ಸಾಧಿಸಲು ಬ್ಯಾಂಕಿಂಗ್‌ ವಲಯದ ಪರಿಶೀಲನೆಗೆ ಬಜೆಟ್‌ನಲ್ಲಿ ಸಮಿತಿ

ಪಿಟಿಐ
Published 1 ಫೆಬ್ರುವರಿ 2026, 16:27 IST
Last Updated 1 ಫೆಬ್ರುವರಿ 2026, 16:27 IST
<div class="paragraphs"><p>ನಿರ್ಮಲಾ ಸೀತಾರಾಮನ್</p><p></p></div>

ನಿರ್ಮಲಾ ಸೀತಾರಾಮನ್

   

ನವದೆಹಲಿ: ‘ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿ’ಯೊಂದನ್ನು ರಚಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಬ್ಯಾಂಕಿಂಗ್‌ ವಲಯವು ದೇಶದ ಮುಂದಿನ ಹಂತದ ಬೆಳವಣಿಗೆಗೆ ಪೂರಕವಾಗಿ ಇರುವಂತೆ ಮಾಡಲು ಈ ಸಮಿತಿಯು ಬ್ಯಾಂಕಿಂಗ್ ವಲಯದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ.

ADVERTISEMENT

ಇಂದು ದೇಶದ ಬ್ಯಾಂಕಿಂಗ್‌ ವಲಯದ ಹಣಕಾಸಿನ ಸ್ಥಿತಿ ಬಹಳ ಗಟ್ಟಿಯಾಗಿದೆ. ದೇಶದ ಬ್ಯಾಂಕ್‌ಗಳು ಹಿಂದೆಂದೂ ಕಾಣದ ಮಟ್ಟದ ಲಾಭ ಗಳಿಸುತ್ತಿವೆ. ಬ್ಯಾಂಕ್‌ಗಳ ಆಸ್ತಿ ಗುಣಮಟ್ಟ ಬಹಳ ಸುಧಾರಿಸಿದೆ. ದೇಶದ ಶೇಕಡ 98ರಷ್ಟಕ್ಕಿಂತ ಹೆಚ್ಚು ಗ್ರಾಮಗಳಿಗೆ ಬ್ಯಾಂಕಿಂಗ್ ಸೇವೆ ತಲುಪಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಹೇಳಿದ್ದಾರೆ.

ಹಣಕಾಸಿನ ಸ್ಥಿರತೆ, ಹಣಕಾಸಿನ ಒಳಗೊಳ್ಳುವಿಕೆ ಮತ್ತು ಗ್ರಾಹಕರಿಗೆ ನೀಡಿರುವ ರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿಯೂ ಈ ಸಮಿತಿಯು ಗಮನ ನೀಡಲಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕೇತರ ಹಣಕಾಸು ಕಂಪನಿಗಳ ಸಾಮರ್ಥ್ಯವನ್ನು ಹೆಚ್ಚು ಮಾಡಲು ಹಾಗೂ ಅವುಗಳ ಗಾತ್ರವನ್ನು ದೊಡ್ಡದಾಗಿಸಲು ಸರ್ಕಾರಿ ಸ್ವಾಮ್ಯದ ಪವರ್ ಫೈನಾನ್ಸ್‌ ಕಾರ್ಪೊರೇಷನ್‌ (ಪಿಎಫ್‌ಸಿ) ಮತ್ತು ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪೊರೇಷನ್‌ (ಆರ್‌ಇಸಿ) ಕಂಪನಿಗಳನ್ನು ಪುನರ್‌ರಚಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.