ADVERTISEMENT

ಏರಿ ಇಳಿದ ಷೇರುಪೇಟೆ ಸೂಚ್ಯಂಕ; ಬಜೆಟ್‌ಗೂ ಮುನ್ನ ಹೂಡಿಕೆದಾರರಲ್ಲಿ ತಲ್ಲಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 7:33 IST
Last Updated 31 ಜನವರಿ 2020, 7:33 IST
ಷೇರುಪೇಟೆ ಸೂಚ್ಯಂಕ ಅವಲೋಕಿಸುತ್ತಿರುವ ಜನರು– ಸಾಂದರ್ಭಿಕ ಚಿತ್ರ
ಷೇರುಪೇಟೆ ಸೂಚ್ಯಂಕ ಅವಲೋಕಿಸುತ್ತಿರುವ ಜನರು– ಸಾಂದರ್ಭಿಕ ಚಿತ್ರ   

ಮುಂಬೈ:ಶುಕ್ರವಾರ ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನ ಷೇರುಪೇಟೆ ಸಂವೇದಿ ಸೂಚ್ಯಂಕ 200 ಅಂಶ ಏರಿಕೆ ದಾಖಲಿಸಿತು. ಬಜೆಟ್‌ ಮತ್ತು ಆರ್ಥಿಕ ಸಮೀಕ್ಷೆ ಮಂಡನೆಯ ಹಿನ್ನೆಯಲ್ಲಿ ಹೂಡಿಕೆದಾರರು ಖರೀದಿ ವಿಶ್ವಾಸ ತೋರಿದಲಾದರೂ ಅಧಿವೇಶನ ಶುರುವಾಗುತ್ತಿದ್ದಂತೆ ಸೂಚ್ಯಂಕ ದಿಢೀರ್‌ ಕುಸಿಯಿತು.

12,000 ಅಂಶ ದಾಟಿದ್ದ ನಿಫ್ಟಿ 61 ಅಂಶ ಕುಸಿದರೆ, 41,000ಕ್ಕೆ ಸಮೀಪದಲ್ಲಿದ್ದ ಸೆನ್ಸೆಕ್ಸ್‌ 165 ಅಂಶ ಕುಸಿಯಿತು.

ಆರ್ಥಿಕತೆಗೆ ಚೇತರಿಕೆ ನೀಡುವ ಕ್ರಮಗಳು ಷೇರುಪೇಟೆ ಏರಿಳಿತವನ್ನು ನಿರ್ಧರಿಸಲಿವೆ. ಫೆ.1 (ಶನಿವಾರ) ಬಜೆಟ್‌ ಮಂಡನೆಯಾಗುವ ಪ್ರಯುಕ್ತ ಷೇರುಪೇಟೆ ವಿಶೇಷ ವಹಿವಾಟಿಗೆ ಅವಕಾಶ ನೀಡಿದೆ. ಶುಕ್ರವಾರ ಖರೀದಿಸುವ ಷೇರುಗಳನ್ನು ಶನಿವಾರ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.

ADVERTISEMENT

ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 962.28 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ₹ 292.35 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಜಾಜ್‌ ಆಟೊ, ಇಂಡಸ್‌ಇಂಡ್‌ ಬ್ಯಾಂಕ್‌, ಹೀರೊ ಮೋಟೊಕಾರ್ಪ್‌, ಐಟಿಸಿ ಹಾಗೂ ಭಾರ್ತಿ ಏರ್‌ಟೆಲ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳ ಬೆಲೆ ಏರಿಕೆ ಕಂಡಿವೆ. ಒಎನ್‌ಜಿಜಿ, ಎಚ್‌ಸಿಎಲ್‌, ಎನ್‌ಟಿಪಿಸಿ ಹಾಗೂ ಟಿಸಿಎಸ್‌ ಸೇರಿದಂತೆ ಹಲವು ಷೇರುಗಳು ಇಳಿಮುಖವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.