ADVERTISEMENT

Budget 2025: ಆದಾಯ ತೆರಿಗೆ ಮಿತಿ ಹೆಚ್ಚಳ; 1 ಕೋಟಿ ಜನರಿಗಿಲ್ಲ ಹೊರೆ: ನಿರ್ಮಲಾ

ಪಿಟಿಐ
Published 1 ಫೆಬ್ರುವರಿ 2025, 11:28 IST
Last Updated 1 ಫೆಬ್ರುವರಿ 2025, 11:28 IST
<div class="paragraphs"><p>ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್</p></div>

ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

   

ನವದೆಹಲಿ: ‘ಆದಾಯ ತೆರಿಗೆ ಮಿತಿಯನ್ನು ಹೊಸ ಪದ್ಧತಿಯಲ್ಲಿ ಸದ್ಯ ಇರುವ ₹7 ಲಕ್ಷದಿಂದ ₹12 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು. ಇದರಿಂದ ಸುಮಾರು ಒಂದು ಕೋಟಿಗೂ ಹೆಚ್ಚಿನ ಜನರು ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವೇತನದಾರರಿಗೆ ₹75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟು ₹12.75 ಲಕ್ಷ ವರೆಗಿನ ವೇತನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.

ADVERTISEMENT

2019ರಲ್ಲಿ ₹5 ಲಕ್ಷಕ್ಕೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಲ್ಯಾಬ್ ಅನ್ನು ₹7 ಲಕ್ಷಕ್ಕೆ ಏರಿಕೆ ಮಾಡಿತ್ತು. ಇದೀಗ ₹12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ

₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ. ₹18 ಲಕ್ಷದವರೆಗೆ ₹70 ಸಾವಿರ ಹಾಗೂ ₹25 ಲಕ್ಷ ವಾರ್ಷಿಕ ಆದಾಯ ಇರುವರಿಗೆ ₹1.10 ಲಕ್ಷ ತೆರಿಗೆ ಉಳಿತಾಯ ಆಗಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

₹ 75 ಸಾವಿರ ತೆರಿಗೆ ರಿಯಾಯಿತಿ ಸ್ಲ್ಯಾಬ್‌ ಮತ್ತು ₹12 ಲಕ್ಷ ಆದಾಯ ಮೀರಿದಲ್ಲಿ ತೆರಿಗೆ ಸ್ಲ್ಯಾಬ್ ಹೀಗಿರಲಿದೆ...

₹ 0–₹4ಲಕ್ಷ ತೆರಿಗೆ ಇಲ್ಲ

₹ 4 ಲಕ್ಷದಿಂದ ₹8ಲಕ್ಷವರೆಗೆ ಶೇ4

₹ 8 ಲಕ್ಷದಿಂದ ₹11ಲಕ್ಷ– ಶೇ 10

₹ 12 ಲಕ್ಷದಿಂದ ರಿಂದ ₹15ಲಕ್ಷ– ಶೇ 15

₹ 16 ಲಕ್ಷದಿಂದ ₹20 ಲಕ್ಷವರೆಗೆ ಶೇ 20

₹ 21 ಲಕ್ಷದಿಂದ ₹24ಲಕ್ಷವರೆಗೆ ಶೇ 25

₹ 25ಲಕ್ಷ ಮೇಲಿನ ಆದಾಯಕ್ಕೆ ಶೇ 30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.