ADVERTISEMENT

Union Budget-2026: ಇನ್ಮುಂದೆ ಮೋಟಾರು ಅಪಘಾತ ಕ್ಲೇಮ್‌ಗಳಿಗೆ ತೆರಿಗೆ ವಿನಾಯಿತಿ!

ಪಿಟಿಐ
Published 1 ಫೆಬ್ರುವರಿ 2026, 16:20 IST
Last Updated 1 ಫೆಬ್ರುವರಿ 2026, 16:20 IST
ನೇರ ತೆರಿಗೆ
ನೇರ ತೆರಿಗೆ   

ನವದೆಹಲಿ: ಮೋಟಾರು ಅಪಘಾತ ಕ್ಲೇಮ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. 

ಅಪಘಾತ ಪ್ರಕರಣಗಳಲ್ಲಿ ಮೋಟಾರು ಅಪಘಾತ ಕ್ಲೇಮ್‌ ನ್ಯಾಯಮಂಡಳಿಯಿಂದ ಪಡೆದುಕೊಳ್ಳುವ ಬಡ್ಡಿ ರೂಪದಲ್ಲಿನ ಯಾವುದೇ ಆದಾಯಕ್ಕೆ ತೆರಿಗೆ ಇರುವುದಿಲ್ಲ ಎಂದು ಘೋಷಿಸಲಾಗಿದೆ.

1988ರ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅಪಘಾತಕ್ಕೆ ಒಳಗಾದ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗೆ ವ್ಯಕ್ತಿಯ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಅಥವಾ ಕಾಯ್ದೆಯ ಅಡಿಯಲ್ಲಿ ತಿಳಿಸಲಾದ ಯಾವುದೇ ದೈಹಿಕ ಗಾಯ ಆದಲ್ಲಿ ನ್ಯಾಯಮಂಡಳಿಯು ಪರಿಹಾರ ಮೊತ್ತ ಹಾಗೂ ಬಡ್ಡಿ ಒದಗಿಸುತ್ತದೆ.

ADVERTISEMENT

ಯಾವುದೇ ವ್ಯಕ್ತಿ ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗೆ ತೆರಿಗೆ ವಿನಾಯಿತಿ ನೀಡಲು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಈ ತಿದ್ದುಪಡಿಯು ಪ್ರಸಕ್ತ ವರ್ಷದ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.