ADVERTISEMENT

Union Budget 2026: ಗೇಮಿಂಗ್, ಎ.ಐಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 14:29 IST
Last Updated 1 ಫೆಬ್ರುವರಿ 2026, 14:29 IST
<div class="paragraphs"><p>ಆನ್‌ಲೈನ್ ಗೇಮಿಂಗ್</p></div>

ಆನ್‌ಲೈನ್ ಗೇಮಿಂಗ್

   

ಐ ಸ್ಟಾಕ್ ಚಿತ್ರ

ನವದೆಹಲಿ: ‘ಅನಿಮೇಶನ್, ವಿಷುವಲ್‌ ಎಫೆಕ್ಟ್ಸ್‌, ಗೇಮಿಂಗ್‌ ಹಾಗೂ ಕಾಮಿಕ್ಸ್‌ (ಎವಿಜಿಸಿ) ಕ್ಷೇತ್ರವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಅಗಾಧ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಗಳು ಇವೆ. ಸಮೀಕ್ಷೆ ಪ್ರಕಾರ, 2030ರ ವೇಳೆಗೆ ಈ ಕ್ಷೇತ್ರಕ್ಕೆ ಸಂಬಂಧಿಸಿದ 20 ಲಕ್ಷ ವೃತ್ತಿಪರರ ಅಗತ್ಯ ಕಂಡುಬರಲಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ADVERTISEMENT

ಹೀಗಾಗಿ, ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೇಶದ 15 ಸಾವಿರ ಶಾಲೆ ಹಾಗೂ 500 ಕಾಲೇಜುಗಳಲ್ಲಿ ‘ಎವಿಜಿಸಿ ಕಂಟೆಂಟ್‌ ಕ್ರಿಯೇಟರ್ ಲ್ಯಾಬ್’ ಸ್ಥಾಪನೆಗೆ ಒತ್ತು ನೀಡಲಾಗುತ್ತದೆ. ಮುಂಬೈನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕ್ರಿಯೇಟಿವ್‌ ಟೆಕ್ನಾಲಜೀಸ್‌ ಈ ಲ್ಯಾಬ್‌ಗಳನ್ನು ಸ್ಥಾಪಿಸಲಿದೆ ಎಂದೂ ಅವರು ಪ್ರಕಟಿಸಿದ್ದಾರೆ.

ಪ್ರಸಕ್ತ ದಿನಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಬಳಕೆ ಹೆಚ್ಚುತ್ತಿದೆ. ರೈತರು, ವಿದ್ಯಾರ್ಥಿಗಳು, ಆರೋಗ್ಯ ಸೇವೆ ಕಾರ್ಯಕರ್ತರು ಸೇರಿ ಎಲ್ಲ ಕ್ಷೇತ್ರದವರಿಗೂ ಎ.ಐ ಪ್ರಯೋಜನ ಸಿಗುವಂತಾಗಬೇಕು. ಇದಕ್ಕಾಗಿ ನಿಯಮಾವಳಿ ರೂಪಿಸುವುದಾಗಿ ಹೇಳಿದ್ದಾರೆ.

ಅನುಸಂಧಾನ ನ್ಯಾಷನಲ್‌ ರಿಸರ್ಚ್‌ ಫಂಡ್‌, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ) ಹಾಗೂ ಇತರ ನಿಧಿಗಳ ಮೂಲಕ ಎ.ಐ, ಮಷಿನ್‌ ಲರ್ನಿಂಗ್, ಕ್ವಾಂಟಮ್‌ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ನೆರವು ನೀಡುವುದನ್ನು ಪ್ರಸ್ತಾಪಿಸಿದ್ದಾರೆ.

ಎ.ಐ ಸೇರಿ ಅಧುನಿಕ ತಂತ್ರಜ್ಞಾನಗಳಿಂದ ಉದ್ಯೋಗ, ಕೌಶಲದ ಅಗತ್ಯತೆ ಮೇಲಿನ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ‘ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮಶೀಲತೆ’ ಕುರಿತ ಉನ್ನತಾಧಿಕಾರ ಸ್ಥಾಯಿ ಸಮಿತಿ ರಚಿಸುವ ಉದ್ದೇಶವಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.