ADVERTISEMENT

ಬಜೆಟ್ ಪ್ರತಿ ಸೋರಿಕೆಯಾಗಿತ್ತು; ಯಾವ ವರ್ಷ ಗೊತ್ತಾ?

ಏಜೆನ್ಸೀಸ್
Published 1 ಫೆಬ್ರುವರಿ 2026, 5:35 IST
Last Updated 1 ಫೆಬ್ರುವರಿ 2026, 5:35 IST
   

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಸತತ 9ನೇ ಬಾರಿಗೆ 2026–27ನೇ ಸಾಲಿನ ಬಜೆಟ್‌ ಮಂಡಿಸುತ್ತಿದ್ದಾರೆ. ಕೋವಿಡ್‌ ಬಳಿಕ 2021–22ನೇ ಸಾಲಿನ ಬಜೆಟ್‌ ಮಂಡನೆ ವೇಳೆ ಕಾಗದ ರಹಿತ ಬಜೆಟ್‌ ಮಂಡನೆ ಮಾಡುವ ಮೂಲಕ ಬಜೆಟ್‌ ಪ್ರತಿ ಹಿಡಿದು ಓದುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ, ಡಿಜಿಟಲ್ ಟ್ಯಾಬ್ಲೆಟ್‌ ಹಿಡಿದು ಬಂದಿದ್ದರು. ಅಂದಿನಿಂದ ಈ ವರ್ಷದವರೆಗೂ ಕಾಗದ ರಹಿತ ಬಜೆಟ್ ಮಂಡನೆ ಮಾಡಲಾಗುತ್ತಿದೆ. 

ಬಜೆಟ್‌ ಪ್ರತಿ ಸೋರಿಕೆ ಆಗಿತ್ತು 

ಸಾಮಾನ್ಯವಾಗಿ ಬಜೆಟ್ಅನ್ನು ಯಾವಾಗಲೂ ಹೆಚ್ಚಿನ ಗೌಪ್ಯತೆಯಡಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸುರಕ್ಷಿತ ಕಚೇರಿಗಳಲ್ಲಿ ಇರುತ್ತಾರೆ. ಬಜೆಟ್‌ ತಯಾರಿಯ ಸಮಯದಲ್ಲಿ ಮೊಬೈಲ್ ಫೋನ್‌ಗಳು ಅಥವಾ ಡಿಜಿಟಲ್ ಸಾಧನಗಳಿಂದ ದೂರವಿರುತ್ತಾರೆ.

ADVERTISEMENT

2020ರವರೆಗೂ ಬಜೆಟ್‌ ಪ್ರತಿಗಳು ಮುದ್ರಣವಾಗುತ್ತಿದ್ದವು. ಇವು ನವದೆಹಲಿಯ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯದಲ್ಲಿ ಮುದ್ರಣವಾಗುತ್ತಿದ್ದವು. ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಬಜೆಟ್‌ ಪ್ರತಿಗಳು ಮುದ್ರಣವಾಗುತ್ತಿತ್ತು. ಆದರೆ 1950ರಲ್ಲಿ  ಮುದ್ರಣ ಪ್ರಕ್ರಿಯೆಯ ಸಮಯದಲ್ಲಿ ಬಜೆಟ್ ಪ್ರತಿಗಳು ಸೋರಿಕೆಯಾಗಿದ್ದವು. ಹೀಗಾಗಿ 1980ರಲ್ಲಿ ಮಿಂಟೋ ರಸ್ತೆಯಲ್ಲಿರುವ ನಾರ್ತ್ ಬ್ಲಾಕ್‌ನ ನೆಲಮಾಳಿಗೆಗೆ ಸ್ಥಳಾಂತರಿಸಲಾಗಿತ್ತು, ಇಂದಿಗೂ ಬಜೆಟ್‌ ಪ್ರತಿ ಮುದ್ರಣಾಲಯ ಅಲ್ಲಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.