ನವದೆಹಲಿ: ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮಿತಿಯನ್ನು ಶೇ 74ಕ್ಕೆ ಹೆಚ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
‘1938ರ ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಫ್‌ಡಿಐ ಮಿತಿಯನ್ನು ಶೇ 49 ರಿಂದ ಶೇ 74ಕ್ಕೆ ಹೆಚ್ಚಿಸಲು ಹಾಗೂ ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವಕ್ಕೆ ಮತ್ತು ನಿಯಂತ್ರಣಕ್ಕೆ ಅವಕಾಶ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘ಹೊಸ ವ್ಯವಸ್ಥೆಯಲ್ಲಿ, ಆಡಳಿತ ಮಂಡಳಿಯ ಬಹುಪಾಲು ನಿರ್ದಶಕರು ಮತ್ತು ನಿರ್ವಹಣಾ ಸದಸ್ಯರು ಭಾರತೀಯ ನಿವಾಸಿಗಳಾಗಿರಲಿದ್ದು, ಶೇ 50ರಷ್ಟು ಸ್ವತಂತ್ರ ನಿರ್ದೇಶಕರು ಇರಬೇಕು. ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ಆಗಿ ಉಳಿಸಿಕೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.