ADVERTISEMENT

ಸರ್ಕಾರಕ್ಕೆ ಯಾವುದರಿಂದ ಎಷ್ಟೆಷ್ಟು ಆದಾಯ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 11:29 IST
Last Updated 1 ಫೆಬ್ರುವರಿ 2023, 11:29 IST
   

ಕೇಂದ್ರ ಸರ್ಕಾರ 2023–24ನೇ ಸಾಲಿನ ತನ್ನ ಬಜೆಟ್‌ನಲ್ಲಿ ಯಾವ ಕ್ಷೇತ್ರದಿಂದ ಎಷ್ಟು ಆದಾಯ ಗಳಿಕೆಯಾಗುತ್ತಿದೆ ಎಂಬ ವಿವರ ನೀಡಿದೆ.

ಈ ಬಜೆಟ್‌ ಅಂದಾಜಿನಂತೆ ಸರ್ಕಾರದ ಒಟ್ಟು ಆದಾಯ ಸುಮಾರು ₹45,14,884 ಕೋಟಿ. ಅದರಲ್ಲಿ ಬಹುಪಾಲು, ಅಂದರೆ ಶೇ 34 ಸಾಲ ಮತ್ತು ಇತರೆ ಮೂಲದಿಂದ ಸರ್ಕಾರದ ಖಜಾನೆ ಸೇರಲಿದೆ. ಜಿಎಸ್‌ಟಿ ಶೇ 17ರಷ್ಟು(₹9,56,600) ಕೋಟಿ ಆದಾಯದ ಮೂಲವಾಗಿದೆ.

ಆದಾಯ ತೆರಿಗೆಯಿಂದ ಶೇ 15, ಅಬಕಾರಿ ಸುಂಕದಿಂದ ಶೇ 7ರಷ್ಟು ಆದಾಯ ಸರ್ಕಾರಕ್ಕೆ ಬರಲಿದೆ. ಕಾರ್ಪೊರೆಟ್‌ ತೆರಿಗೆ ಶೇ 15, ತೆರಿಗೆಯೇತರ ಸ್ವೀಕೃತಿ ಶೇ 6, ಸಾಲೇತರ ಬಂಡವಾಳ ಸ್ವೀಕೃತಿ ಶೇ 2, ಸುಂಕ ಶೇ 4ರಷ್ಟು ಆದಾಯದ ಮೂಲವಾಗಿದೆ.

ADVERTISEMENT

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.