ADVERTISEMENT

Video | ಕೇಂದ್ರ ಬಜೆಟ್‌ 2025: ಓಲ್ಡ್‌ ರೆಜಿಮ್‌ಗೆ ತಿಲಾಂಜಲಿ?

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 13:43 IST
Last Updated 1 ಫೆಬ್ರುವರಿ 2025, 13:43 IST

ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್‌ ಮಂಡಿಸಿರುವ ನಿರ್ಮಲಾ ಸೀತಾರಾಮನ್‌, ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರ ತೆರಿಗೆ ಸ್ಲ್ಯಾಬ್‌ನಲ್ಲಿ ಹಲವು ಬದಲಾವಣೆ ತಂದಿದ್ದಾರೆ. ನ್ಯೂ ರೆಜಿಮ್‌ನಲ್ಲಿರುವ ವೇತನದಾರರಿಗೆ ₹12 ಲಕ್ಷ ಮಾತ್ರವಲ್ಲದೆ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮೊತ್ತ, ₹75 ಸಾವಿರ ಸೇರಿ, ₹12 ಲಕ್ಷ 75ಸಾವಿರದವರೆಗಿನ ಆದಾಯಕ್ಕೆ ಅವರು ಯಾವುದೇ ತೆರಿಗೆ ಕಟ್ಟುವಂತಿಲ್ಲ. ಆದರೆ, ಈ ಮೊತ್ತಕ್ಕಿಂತ, ಕೇವಲ ₹1 ಹೆಚ್ಚಾದರೂ, ತೆರಿಗೆ ವ್ಯಾಪ್ತಿಗೆ ಒಳಪಡಬೇಕಾಗುತ್ತದೆ. ಈ ಹೊಸ ಘೋಷಣೆಯಿಂದ, ದೈನಂದಿನ ಜೀವನದಲ್ಲಿ ಹಣದ ಹರಿವು ಹೆಚ್ಚಾಗಿ, ಹೂಡಿಕೆ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.