ADVERTISEMENT

ಕೈಗಾರಿಕಾ ಪ್ರಗತಿ ಹೆಚ್ಚಳ

ಗಣಿಗಾರಿಕೆ, ತಯಾರಿಕಾ ವಲಯಗಳ ಅಭಿವೃದ್ಧಿ ಪ್ರಭಾವ

ಪಿಟಿಐ
Published 16 ಜೂನ್ 2018, 11:19 IST
Last Updated 16 ಜೂನ್ 2018, 11:19 IST
ಕೈಗಾರಿಕಾ ಪ್ರಗತಿ ಹೆಚ್ಚಳ
ಕೈಗಾರಿಕಾ ಪ್ರಗತಿ ಹೆಚ್ಚಳ   

ನವದೆಹಲಿ (ಪಿಟಿಐ): ದೇಶದ ಕೈಗಾರಿಕಾ ಪ್ರಗತಿಯು ಏಪ್ರಿಲ್‌ನಲ್ಲಿ ಶೇ 4.9ಕ್ಕೆ ಏರಿಕೆ ಕಂಡಿದೆ. ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಉತ್ತಮ ಪ್ರಗತಿಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಮಾಹಿತಿ ನೀಡಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಪ್ರಗತಿಯು 2017ರ ಏಪ್ರಿಲ್‌ನಲ್ಲಿ ಶೇ 3.2 ರಷ್ಟಿತ್ತು. ಅದಕ್ಕೆ ಹೋಲಿಸಿದರೆ 2018ರ ಏಪ್ರಿಲ್‌ನಲ್ಲಿ ಶೇ 1.7 ರಷ್ಟು ಹೆಚ್ಚಾಗಿದೆ.

2018ರ ಮಾರ್ಚ್‌ನಲ್ಲಿ ಶೇ 4.4ರಷ್ಟು ಪ್ರಗತಿ ಸಾಧ್ಯವಾಗಿತ್ತು.

ADVERTISEMENT

ತಯಾರಿಕಾ ವಲಯವು ಕೈಗಾರಿಕಾ ಪ್ರಗತಿಗೆ ಶೇ 77ರಷ್ಟು ಕೊಡುಗೆ ನೀಡುತ್ತಿದ್ದು, ಏಪ್ರಿಲ್‌ನಲ್ಲಿ ಶೇ 5.2 ರಷ್ಟು ಪ್ರಗತಿ ಸಾಧಿಸಿದೆ. ಗಣಿ ಚಟುವಟಿಕೆಯೂ ಶೇ 3 ರಿಂದ ಶೇ 5.1ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.