ADVERTISEMENT

Cash On Delivery ವೇಳೆ ₹2 ಸಾವಿರದ ನೋಟುಗಳನ್ನೇ ಕೊಡುತ್ತಿರುವ ಗ್ರಾಹಕರು! Zomato

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2023, 10:05 IST
Last Updated 22 ಮೇ 2023, 10:05 IST
ಜೊಮ್ಯಾಟೊ ಹಂಚಿಕೊಂಡಿರುವ ಚಿತ್ರ
ಜೊಮ್ಯಾಟೊ ಹಂಚಿಕೊಂಡಿರುವ ಚಿತ್ರ    

ಬೆಂಗಳೂರು: ಕಳೆದ ಶುಕ್ರವಾರದಿಂದ ‘ಕ್ಯಾಶ್‌ ಆನ್‌ ಡೆಲಿವರಿ’ ವೇಳೆ ಶೇಕಡಾ 72%ರಷ್ಟು ಗ್ರಾಹಕರು ₹2,000 ಮುಖಬೆಲೆಯ ನೋಟುಗಳನ್ನೇ ನೀಡುತ್ತಿರುವುದಾಗಿ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊ ಟ್ವೀಟ್‌ ಮಾಡಿ ತಿಳಿಸಿದೆ.

₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಘೋಷಿಸಿತು. ಸಾರ್ವಜನಿಕರು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ತಿಳಿಸಿತ್ತು.

ಆರ್‌ಬಿಐನ ನಿರ್ಧಾರದಿಂದಾಗಿ ಗ್ರಾಹಕರು ಹೆಚ್ಚಾಗಿ ‘ಕ್ಯಾಶ್‌ ಆನ್‌ ಡೆಲಿವರಿ’ಗೆ ಮೊರೆ ಹೋಗಿದ್ದು, ಹಣ ನೀಡುವ ವೇಳೆ ಹೆಚ್ಚಾಗಿ ₹2 ಸಾವಿರದ ನೋಟುಗಳನ್ನೇ ನೀಡುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ಜೊಮ್ಯಾಟೊ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ನನ್ನ ಮುಂದಿನ ಆಯ್ಕೆ ಕ್ಯಾಶ್‌ ಆನ್‌ ಡೆಲಿವರಿ ಆಗಿರುತ್ತದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ‘ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳೇ ಬೇಕಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.