ADVERTISEMENT

ಐಎಎನ್‌ಎಸ್‌ ಸುದ್ದಿಸಂಸ್ಥೆಯ ಅರ್ಧದಷ್ಟು ಷೇರು ಅದಾನಿ ಪಾಲು

ಪಿಟಿಐ
Published 16 ಡಿಸೆಂಬರ್ 2023, 14:56 IST
Last Updated 16 ಡಿಸೆಂಬರ್ 2023, 14:56 IST
<div class="paragraphs"><p>ಅದಾನಿ ಗ್ರೂಪ್ಸ್‌</p></div>

ಅದಾನಿ ಗ್ರೂಪ್ಸ್‌

   

ರಾಯಿಟರ್ಸ್‌

ನವದೆಹಲಿ: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಸುದ್ದಿಸಂ‌ಸ್ಥೆಯಾದ ಐಎಎನ್‌ಎಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಅತಿಹೆಚ್ಚು ಷೇರುಗಳ ಮೇಲೆ ಒಡೆತನ ಸ್ಥಾಪಿಸಿದೆ. 

ADVERTISEMENT

‘ಮಾಧ್ಯಮಗಳ ಉಸ್ತುವಾರಿ ಹೊತ್ತಿರುವ ತನ್ನ ಅಂಗಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್‌ (ಎಎಂಎನ್‌ಎಲ್‌) ಐಎಎನ್‌ಎಸ್‌ನಲ್ಲಿನ ಶೇ 50.50ರಷ್ಟು ಷೇರುಗಳನ್ನು ಖರೀದಿಸಿದೆ’ ಎಂದು ಅದಾನಿ ಸಮೂಹ ಹೇಳಿದೆ. ಆದರೆ, ಈ ಖರೀದಿಗೆ ಎಷ್ಟು ಮೊತ್ತ ಭರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಕಳೆದ ವರ್ಷದ ಮಾರ್ಚ್‌ನಲ್ಲಿ ಕ್ವಿಂಟಿಲಿಯನ್ ಬ್ಯುಸಿನೆಸ್‌ ಮೀಡಿಯವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಉದ್ಯಮಿ ಅದಾನಿ, ತಮ್ಮ ಉದ್ಯಮವನ್ನು ಮಾಧ್ಯಮ ಕ್ಷೇತ್ರಕ್ಕೂ ವಿಸ್ತರಿಸಿದ್ದರು. ಬಳಿಕ ಅದೇ ವರ್ಷದ ಡಿಸೆಂಬರ್‌ನಲ್ಲಿ ನ್ಯೂ ಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ನಲ್ಲಿ (ಎನ್‌ಡಿಟಿವಿ) ಶೇ 65ರಷ್ಟು ಷೇರುಗಳನ್ನು ತನ್ನದಾಗಿಸಿಕೊಂಡಿದ್ದರು.

2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗಿನ ಆರ್ಥಿಕ ವರ್ಷದಲ್ಲಿ ಐಎಎನ್‌ಎಸ್‌ ಒಟ್ಟು ₹11.86 ಕೋಟಿ ಲಾಭಗಳಿಸಿದೆ.

‘ಐಎಎನ್‌ಎಸ್ ಮತ್ತು ಅದರ ಷೇರುದಾರ ಸಂದೀಪ್ ಬಾಮ್‌ಜಾಯ್ ಜತೆಗೆ ಎಎಂಎನ್‌ಎಲ್ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಮುಂದೆ ಈ ಸುದ್ದಿಸಂಸ್ಥೆಯ ಕಾರ್ಯ ನಿರ್ವಹಣೆಯು ಎಎಂಎನ್‌ಎಲ್‌ಗೆ ಒಳಪಟ್ಟಿದೆ. ನಿರ್ದೇಶಕರ ನೇಮಕದ ಹಕ್ಕನ್ನೂ ಹೊಂದಿದೆ’ ಎಂದು ಅದಾನಿ ಗ್ರೂಪ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.