ನವದೆಹಲಿ: ಗುಜರಾತ್‌ನಲ್ಲಿ ₹2,800 ಕೋಟಿ ಮೌಲ್ಯದ ವಿದ್ಯುತ್ ಪ್ರಸರಣ ಯೋಜನೆಯ ಗುತ್ತಿಗೆ ಪಡೆಯಲಾಗಿದೆ ಎಂದು ಅದಾನಿ ಎನರ್ಜಿ ಸಲ್ಯೂಷನ್ಸ್ ಕಂಪನಿ (ಎಇಎಸ್ಎಲ್) ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪನಿಯು ಗುಜರಾತ್ ರಾಜ್ಯ ಸರ್ಕಾರದಿಂದ ಪಡೆಯುತ್ತಿರುವ ಐದನೇ ಗುತ್ತಿಗೆ ಇದಾಗಿದೆ. ಇಲ್ಲಿಯವರೆಗಿನ ಗುತ್ತಿಗೆಗಳ ಮೌಲ್ಯ ₹57,561 ಕೋಟಿ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ಶುಕ್ರವಾರ ಮಾಹಿತಿ ನೀಡಿದೆ.
ಈ ಯೋಜನೆಯಡಿ ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದೆ.
ಅದಾನಿ ಸಮೂಹಕ್ಕೆ ಸೇರಿದ ಎಇಎಸ್‌ಎಲ್, ವಿದ್ಯುತ್ ಪ್ರಸರಣ, ಸ್ಮಾರ್ಟ್ ಮೀಟರ್ ಅಳವಡಿಕೆ ಸೇರಿ ಬಹುಆಯಾಮದ ಸೇವೆ ಒದಗಿಸುತ್ತದೆ. ದೇಶದ ಖಾಸಗಿ ವಲಯದ ಅತಿದೊಡ್ಡ ವಿದ್ಯುತ್ ಪೂರೈಕೆ ಕಂಪನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.