ನವದೆಹಲಿ: ಅದಾನಿ ವಿಲ್ಮರ್ ಲಿಮಿಟೆಡ್‌ನಿಂದ ಹೊರ ಬರುತ್ತಿರುವುದಾಗಿ ಅದಾನಿ ಸಮೂಹವು ಸೋಮವಾರ ಘೋಷಿಸಿದೆ.
ಅದಾನಿ ವಿಲ್ಮರ್ ಕಂಪನಿಯು ಅದಾನಿ ಸಮೂಹ ಮತ್ತು ಸಿಂಗಪುರದ ವಿಲ್ಮರ್ ಸಮೂಹದ ನಡುವಿನ ಜಂಟಿ ಉದ್ಯಮವಾಗಿದೆ. ವಿಲ್ಮರ್ ಲಿಮಿಟೆಡ್‌ನಲ್ಲಿ ಅದಾನಿ ಸಮೂಹವು ಶೇ 44ರಷ್ಟು ಷೇರನ್ನು ಹೊಂದಿದೆ.
ವಿಲ್ಮರ್ ಸಮೂಹಕ್ಕೆ ಶೇ 31ರಷ್ಟು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಶೇ 13ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ. ಇದರಿಂದ ₹17 ಸಾವಿರ ಕೋಟಿಗೂ ಹೆಚ್ಚು ಸಂಗ್ರಹಿಸಲಿದೆ. ಈ ಮೂಲಕ ಅದಾನಿ ವಿಲ್ಮರ್ ಲಿಮಿಟೆಡ್‌ನಿಂದ ಸಂಪೂರ್ಣ ನಿರ್ಗಮಿಸುತ್ತಿರುವುದಾಗಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹೇಳಿದೆ.
ಈ ವಹಿವಾಟು 2025ರ ಮಾರ್ಚ್ 31ರ ಮೊದಲು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಅದಾನಿ ವಿಲ್ಮರ್ ಭಾರತದ ಪ್ರಮುಖ ಎಫ್‌ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ವಸ್ತುಗಳು) ಕಂಪನಿಯಾಗಿದ್ದು, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಅಕ್ಕಿ, ಧಾನ್ಯಗಳು, ಕಡಲೆ ಹಿಟ್ಟು, ಸಕ್ಕರೆ ಸೇರಿದಂತೆ ಅಡುಗೆ ಪದಾರ್ಥಗಳನ್ನು ಮಾರಾಟ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.