
ಪಿಟಿಐ
ಮುಂಬೈ: ಮುಂದಿನ ಐದು ವರ್ಷದಲ್ಲಿ ವಿಮಾನ ನಿಲ್ದಾಣ ವ್ಯವಹಾರದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಮಾಡಲು ಅದಾನಿ ಸಮೂಹ ಯೋಜಿಸಿದೆ.
ದೇಶದ ವಿಮಾನಯಾನ ಉದ್ಯಮವು ಸುಸ್ಥಿರ ಬೆಳವಣಿಗೆ ಕಾಣುತ್ತಿದ್ದು, ವಾರ್ಷಿಕ ಶೇ 15ರಿಂದ ಶೇ 16ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ಅದಾನಿ ಏರ್‌ಪೋರ್ಟ್ಸ್‌ನ ನಿರ್ದೇಶಕ ಜೀತ್ ಅದಾನಿ ಹೇಳಿದ್ದಾರೆ.
ಡಿಸೆಂಬರ್ 25ರಿಂದ ನವಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ಸೇವೆ ಆರಂಭವಾಗಲಿದೆ. ಈ ವಿಮಾನ ನಿಲ್ದಾಣವನ್ನು ಅದಾನಿ ಸಮೂಹವು ಅಭಿವೃದ್ಧಿಪಡಿಸಿದ್ದು, ಶೇ 74ರಷ್ಟು ಪಾಲು ಹೊಂದಿದೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿರುವ ಎರಡು ವಿಮಾನ ನಿಲ್ದಾಣಗಳಲ್ಲದೆ, ಅದಾನಿ ಸಮೂಹವು ಅಹಮದಾಬಾದ್, ಲಖನೌ, ಗುವಾಹಟಿ, ತಿರುವನಂತಪುರಂ, ಜೈಪುರ ಮತ್ತು ಮಂಗಳೂರಿನಲ್ಲಿರುವ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.