ನವದೆಹಲಿ: ಒಂದು ವಾರದ ಬಿಡುವಿನ ನಂತರ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ಪೈಸೆಯಂತೆ ಹೆಚ್ಚಿಸಿವೆ.
ಪೆಟ್ರೋಲ್ ಬೆಲೆಯಲ್ಲಿ ಸತತ 8ನೇ ದಿನವೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಜೂನ್ 29ರಂದು ಇಂಧನಗಳ ಬೆಲೆಗಳನ್ನು ಪರಿಷ್ಕರಿಸಿದ ನಂತರ ಇಂದಿನವರೆಗೆ ಬೆಲೆ ಏರಿಸಿರಲಿಲ್ಲ. ಇದುವರೆಗಿನ ಬೆಲೆ ಏರಿಕೆಯಿಂದಾಗಿ ಡೀಸೆಲ್ ಬೆಲೆ ₹ 11.39 ಮತ್ತು ಪೆಟ್ರೋಲ್ ಬೆಲೆ ₹ 9.17ರಷ್ಟು ತುಟ್ಟಿಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 87.19ಕ್ಕೆ ತಲುಪಿದ್ದರೆ ಬೆಂಗಳೂರಿನಲ್ಲಿ ₹ 83.04ರಲ್ಲಿದೆ. ಡೀಸೆಲ್ ಬೆಲೆ 21 ಪೈಸೆ ಏರಿಕೆಯಾಗಿ ₹ 76.79 ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.