
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರ ಪ್ರದೇಶದ ಕೃಷಿ ಆಸಕ್ತರಿಗೆ‘ಹೊಸಚಿಗುರು’ ಸಂಸ್ಥೆ ತನ್ನ ಹೊಸ ಯೋಜನೆ ‘ಅಭಿವೃದ್ಧಿ’ ಆರಂಭಿಸಿದೆ.ಈ ಯೋಜನೆ ಮೂಲಕ ಗ್ರಾಹಕರು ಕೃಷಿ ಭೂಮಿ ಕೊಳ್ಳುವುದಲ್ಲದೇ, ಬೇಸಾಯದ ಅನುಭವ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀನಾಥ್ ಹೇಳಿದರು.
ಹಿಂದೂಪುರದಲ್ಲಿ 108 ಎಕರೆ ಪ್ರದೇಶದಲ್ಲಿ ಕೃಷಿ ಭೂಮಿ ಇದ್ದು. ಮಾವು ಸೇರಿದಂತೆ ವಿವಿಧ ಹಣ್ಣುಗಳ ಗಿಡಗಳನ್ನು ನೆಡಲಾಗಿದೆ. ತೇಗ, ಮಹಾಗನಿ ಮತ್ತು ಶ್ರೀಗಂಧ ಕೃಷಿಯೂ ಇದೆ. ಈ ಭೂಮಿಯನ್ನು ಗ್ರಾಹಕರು ಚದರ ಅಡಿಗೆ ₹ 59 ನೀಡಿ ಕೊಳ್ಳಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ವರ್ಷದ ನಿರ್ವಹಣಾ ವೆಚ್ಚ ಉಚಿತವಾಗಿದ್ದು, ಬಂದ ಲಾಭದಲ್ಲಿ ಶೇ 70 ಪಾಲು ಗ್ರಾಹಕರಿಗೇ ಸಿಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.