ADVERTISEMENT

ಎ.ಐ ವಲಯದಲ್ಲಿ ಅಗತ್ಯ ಎದುರಾದರೆ ನಿಯಂತ್ರಣ: ಎಸ್. ಕೃಷ್ಣನ್

ಪಿಟಿಐ
Published 5 ನವೆಂಬರ್ 2025, 15:18 IST
Last Updated 5 ನವೆಂಬರ್ 2025, 15:18 IST
   

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ವಲಯದಲ್ಲಿ ಅಗತ್ಯ ಸೃಷ್ಟಿಯಾದಾಗ ನಿಯಂತ್ರಣ ಕ್ರಮಗಳನ್ನು ಅಥವಾ ಕಾನೂನನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.

ಈಗ ಸರ್ಕಾರವು ಕೃತಕ ಬುದ್ಧಿಮತ್ತೆ ವಲಯದಲ್ಲಿನ ಆವಿಷ್ಕಾರಗಳ ಮೇಲೆ ಗಮನ ನೀಡುತ್ತಿದೆ. ಎ.ಐ. ಮೂಲಕ ದೇಶದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ತಂದುಕೊಡಲು ಸರ್ಕಾರ ಬಯಸುತ್ತಿದೆ ಎಂದು ಅವರು ಬುಧವಾರ ಹೇಳಿದ್ದಾರೆ.

‘ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಭಾವಿಸುವುದಾದರೆ, ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದು ಇಂದಿನ ಆದ್ಯತೆ ಆಗುವುದಿಲ್ಲ... ಆದರೆ ನಿಯಂತ್ರಣ ಕ್ರಮಗಳಿಗೆ ಅಥವಾ ಕಾನೂನಿನ ಜಾರಿಗೆ ಅಗತ್ಯ ಎದುರಾದರೆ ಸರ್ಕಾರ ಆಗ ಹಿಂದೇಟು ಹಾಕುವುದಿಲ್ಲ’ ಎಂದು ಕೃಷ್ಣನ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.